ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರಿಗೆ ನೈತಿಕ ಬೆಂಬಲ : ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ
ಶಾಸಕ ರಮೇಶ ಜಾರಕಿಹೊಳಿ ಅವರಿಗೆ ನೈತಿಕ ಬೆಂಬಲ : ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 6 :
ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಇಂದೂ ಕೂಡ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದ್ದು, ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮವನ್ನು ಸಂಪೂರ್ಣ ಬಂದ್ ಪ್ರತಿಭಟನೆ ಮಾಡಿದ್ದಾರೆ.
ಅಂಕಲಗಿ ಗ್ರಾಮ ಸಂಪೂರ್ಣ ಸ್ಥಬ್ದವಾಗಿದ್ದು, ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಪ್ರತಿಭಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಶಾಸಕ ರಮೇಶ್ ವಿರುದ್ಧ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ದಿನೇಶ ಕಲ್ಲಹಳ್ಳಿ ಸಿ.ಡಿ. ಪ್ರಕರಣಕ್ಕೆ ಸಂಬಂದಿಸಿದಂತೆ ಶನಿವಾರ ಸಮಸ್ತ ಕುಂದರನಾಡಿನ ಅಂಕಲಗಿ, ಅಕ್ಕತಂಗೇರಹಾಳ, ಮದವಾಲ, ಗುಜನಾಳ, ಸುಲಧಾಳ, ಬೆಣಚನಮರಡಿ, ಕುಂದರಗಿ ಸೇರಿದಂತೆ ಮುಂತಾದ ಗ್ರಾ.ಪಂ ವ್ಯಾಪ್ತಿಯ ಸುಮಾರು 3 ಸಾವಿರಕ್ಕೂ ಹೆಚ್ಚು ರಮೇಶರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರಲ್ಲದೆ, ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕು. ಪ್ರಕರಣದ ಸತ್ಯಾ ಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.
ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೂಗಿದ ಅಭಿಮಾನಿಗಳು ಉತ್ತರ ಕರ್ನಾಟಕದ ಪ್ರಮುಖ ನಾಯಕರಾಗಿ ಬೆಳೆಯುತ್ತಿರುವ ರಮೇಶ ಜಾರಕೀಹೊಳಿ ಅವರ ಶಕ್ತಿ ಕುಗ್ಗಿಸುವ ಯತ್ನ ಇದಾಗಿದೆ. ಇದು ಕ್ರೂರ ಅನ್ಯಾಯ ಇದನ್ನು ಸಹಿಸಲಾಗದು ಎಂದು ಅಭಿಮಾನಿ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅಂಕಲಗಿಯಲ್ಲಿ ಬೆಳಗಿನಿಂದಲೇ ಅಂಗಡಿ, ಮುಗ್ಗಟ್ಟು ಗಳು ಸ್ವಯಂ ಪ್ರೇರಿತರಾಗಿ ಬಂದ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಪ್ರತಿಭಟನಾಕಾರರು ಟೈರ್‍ಗೆ ಬೆಂಕಿಹಚ್ಚಿ ತಮ್ಮ ಆಕ್ರೋಷ ಹೊರಹಾಕಿದರು.
ಎಲ್ಲ ಪ್ರತಿಭಟನಾಕಾರರು ಅಂಕಲಗಿ ಪೆÇೀಲಿಸ ಠಾಣೆಯ ವರೆಗೆ ಪಾದಯಾತ್ರೆಯ ಮೂಲಕ ತೆರಳಿ ಉಪತಹಶೀಲ್ದಾರ ಕಟ್ಟೀಮನಿ. ಮತ್ತು ಹೆಚ್ಚುವರಿ. ಎಸ್.ಪಿ. ಅಮರನಾಥ ರೆಡ್ಡಿ ಅವರಿಗೆ ಸೂಕ್ತ ಕ್ರಮಕ್ಕೆ ಮನವಿ ಅರ್ಪಿಸಿದರು. ಬೆಳಗಿನ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂಪೂರ್ಣ ಬಸ್ ಮತ್ತಿತರ ವಾಹನಗಳ ಓಡಾಟ ಸ್ತಗಿತಗೊಂಡಿತ್ತು.
ಪ್ರತಿಭಟನೆಯಲ್ಲಿ ಸುತ್ತಲಿನ ಗ್ರಾಮಗಳ ಮುಖಂಡರಾದ ಭೀಮಗೌಡ ಪೆÇೀಲಿಸಗೌಡರ ಶಿವಾನಂದ ಡೋಣಿ, ಬಸನಗೌಡ ನಿರ್ವಾಣಿ, ಶಂಕರ ಭೂಸಣ್ಣವರ, ರಾಜು ತಳವಾರ, ಮುನ್ನಾ ದೇಸಾಯಿ, ಮಲ್ಲಿಕಾರ್ಜುನ ನಾಯಿಕ, ರವಿ ಭಡಕಲ್ , ಶಿವನಪ್ಪಾ ಕುಂದರಗಿ, ಬೋರಪ್ಪಾ ತಳವಾರ, ಬಸವರಾಜ ಪಟ್ಟಣಶೆಟ್ಟಿ, ಅಜಿತ ಹರಿಜನ, ಸಿ.ಎನ್.ಬಡವನ್ನವರ, ರಾಮಣ್ಣಾ ಸುಂಬಳಿ,ಮಾಜಿ ಶಾಸಕ, ಎಮ್ .ಎಲ್ .ಮುತ್ತೆನ್ನವರ, ನಟರಾಜ ಶೆಟ್ಟೆಣ್ಣವರ, ಮಹಾದೇವ ಶ್ರೇಷ್ಟಿ, ಎಲ್.ಕೆ.ಪೂಜೇರಿ, ವಿರುಪಾಕ್ಷಿ ಅಂಗಡಿ, ಆನಂದ ಅತ್ತು, ಅನ್ನಪೂರ್ಣಾ ನಿರ್ವಾಣಿ, ರಾಮಚಂದ್ರ ಬಳೋಬಾಳ, ಮಾರುತಿ ಗೋಡಲ ಕುಂದರಗಿ, ಅಡಿವೆಪ್ಪಾ ಮಳಗಲಿ, ಅಡಿವೆಪ್ಪಾ ನಾವಲಗಟ್ಟಿ, ಬಸಪ್ಪಾ ಉರಬಿನಹಟ್ಟಿ. ಸತ್ಯಪ್ಪಾ ಅವ್ವನ್ನಗೋಳ, ಶಿವಾನಂದ ಪಂಗನ್ನವರ, ಮಲ್ಲಿಕಾರ್ಜುನ ನಾಯಿಕ, ರವಿ ಭಡಕಲ್ ಅಡಿವೆಪ್ಪಾ ಈಶ್ವರಪ್ಪಗೋಳ ಮುಂತಾದವರಿದ್ದರು.