RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಕಲಿ ಸಿ.ಡಿ ಕುರಿತು ತನಿಖೆ ಮಾಡುವಂತೆ ಆಗ್ರಹಿಸಿ ಮಕ್ಕಳಗೇರಿ, ಹಿರೆಹಟ್ಟಿ, ಹನಮಾಪೂರ, ಶೀಲ್ತಿಬಾವಿ ಗ್ರಾಮಸ್ಥರ ಪ್ರತಿಭಟನೆ

ಗೋಕಾಕ:ನಕಲಿ ಸಿ.ಡಿ ಕುರಿತು ತನಿಖೆ ಮಾಡುವಂತೆ ಆಗ್ರಹಿಸಿ ಮಕ್ಕಳಗೇರಿ, ಹಿರೆಹಟ್ಟಿ, ಹನಮಾಪೂರ, ಶೀಲ್ತಿಬಾವಿ ಗ್ರಾಮಸ್ಥರ ಪ್ರತಿಭಟನೆ 

ನಕಲಿ ಸಿ.ಡಿ ಕುರಿತು ತನಿಖೆ ಮಾಡುವಂತೆ ಆಗ್ರಹಿಸಿ ಮಕ್ಕಳಗೇರಿ, ಹಿರೆಹಟ್ಟಿ, ಹನಮಾಪೂರ, ಶೀಲ್ತಿಬಾವಿ ಗ್ರಾಮಸ್ಥರ ಪ್ರತಿಭಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 7 :

 
ರಮೇಶ ಜಾರಕಿಹೊಳಿ ಅವರ ನಕಲಿ ಸಿ.ಡಿ ಕುರಿತು ತನಿಖೆ ಮಾಡುವಂತೆ ಆಗ್ರಹಿಸಿ ಮಕ್ಕಳಗೇರಿ, ಹಿರೆಹಟ್ಟಿ, ಹನಮಾಪೂರ, ಶೀಲ್ತಿಬಾವಿ , ಜಮುನಾಳ , ಪುಡಕಲ್ಲಕಟ್ಟಿ, ಹೂಲಿಕಟ್ಟಿಯ ಗ್ರಾಮಸ್ಥರು ಮಕ್ಕಳಗೇರಿ ಗ್ರಾಮದಲ್ಲಿ ರವಿವಾರದಂದು ಬೃಹತ್ ಪ್ರತಿಭಟನೆ ನಡೆಯಿಸಿ ಪಿಡಿಓ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಮೇಶ ಜಾರಕಿಹೊಳಿ ಅವರ ಏಳ್ಗೆ ಹಾಗೂ ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಅವರ ಚಾರಿತ್ರ್ಯಕ್ಕೆ ಕಳಂಕ ತರುವ ಉದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕೆಲ ವಿರೋಧ ಪಕ್ಷದವರು ಷಡ್ಯಂತ್ರ ರೂಪಿಸಿ ನಕಲಿ ಹನಿಟ್ರ್ಯಾಫ್ ಸಿಡಿ ಮಾಡಿರುತ್ತಾರೆ ಅವರ ಮೇಲೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ. ಹಾಗೂ ಅವರು ಒಳ್ಳೆಯ ಕುಟುಂಬ ಸುಸಂಸ್ಕೃತ ಕುಟುಂಬರಾಗಿದ್ದು , ಸಚ್ಚಾರಿತ್ರ್ಯವಂತರಾಗಿರುವ ರಮೇಶ ಜಾರಕಿಹೊಳಿ ಅವರನ್ನು ಪುನಃ ಮಂತ್ರಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಭರಮನ್ನ ಮುತ್ತೆನ್ನವರ , ಪ್ರಕಾಶ ತೋಳಿನವರ, ಪ್ರಶಾಂತ ಕಾಗಲ್ , ಪಾಂಡಪ್ಪ ಮೇಟಿ, ಬಸವರಾಜ ದಂಡಿನ, ನಿಂಗಪ್ಪ ತೋಳಿನವರ, ತುಕಾರಾಮ ಬಚ್ಚನವರ , ಇಮ್ರಾನ್ ಶಿವಾಪೂರ, ಸಾವಕ್ಕ ದುರದುಂಡಿ, ಅವಕ್ಕ ಗಸ್ತಿ, ಅಶೋಕ ದುರದುಂಡಿ, ಅಶೋಕ ಗೋಣಿ, ಭರಮನ್ನ ಬನಸಿ, ರಾಮಚಂದ್ರ ಗಸ್ತಿ, ಯಲ್ಲಪ್ಪ ಹರಿಜನ, ರಾಯಪ್ಪ ಗೋರಗುದ್ದಿ, ಸಿದ್ದಪ್ಪ ಲೋಕುರೆ, ಸಲ್ಲಿಂ ಕಾಜಿ, ಇಮ್ತಿಯಾಜ ಕಾಜಿ ಸೇರಿದಂತೆ ಅನೇಕರು ಇದ್ದರು.

Related posts: