ಬೆಳಗಾವಿ:ಜೆಸಿಬಿ ಬಳಸಿ ಬ್ಯಾರಿಕೇಡ ತೆರವುಗೊಳಿಸಿದ ನ್ಯಾಯವಾದಿಗಳು
ಜೆಸಿಬಿ ಬಳಸಿ ಬ್ಯಾರಿಕೇಡ ತೆರವುಗೊಳಿಸಿದ ನ್ಯಾಯವಾದಿಗಳು
ಬೆಳಗಾವಿ ಸೆ 11: ನಗರದ ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಡುವೆ ಲೊಕೋಪಯೋಗಿ ಇಲಾಖೆ ವತಿಯಿಂದ ಹಾಕಲಾಗಿದ್ದ ಬ್ಯಾರಿಕೇಡ್ ಭಿನ್ನಾಭಿಪ್ರಾಯ ಇಂದು ತಣ್ಣಗಾದಂತಾಗಿದೆ. ಮೊದಲ ಬಾರಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಯಾರೂ ಆಗುಂತಕರು ಗ್ರಿಲ್ ಕೊರೆಸಿದ್ದರು. ಮತ್ತೆ ಪೊಲೀಸ್ ಮತ್ತು PWD ಅಧಿಕಾರಿಗಳು ತಳಗೋಡೆ ಸಹಿತ ಮರು ಬ್ಯಾರಿಕೇಡ್ ನಿರ್ಮಿಸಿದ್ದರು
ಮತ್ತೆ ಇಂದು ಪ್ರತಿಭಟನೆ ಹಮ್ಮಿಕೊಂಡ ನ್ಯಾಯವಾದಿಗಳು ರಸ್ತೆ ತಡೆ ನಡೆಸಿದರು. ಸ್ವತಃ ಡಿಸಿಪಿ ಅಮರನಾಥರೆಡ್ಡಿ ತಿಳುವಳಿಕೆ ನೀಡಿದರು ನ್ಯಾಯವಾದಿಗಳು ಜಗ್ಗಲಿಲ್ಲ. ಕೈಯಿಂದಲೇ ಬ್ಯಾರಿಕೇಡ್ ಹಠಾವೋ ಯತ್ನ ನಡೆಸಿದರು. ಈ ಸಂದರ್ಭ ಕೆಲ ನ್ಯಾಯವಾದಿಗಳು ಜೆಸಿಬಿ ತರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬ್ಯಾರಿಕೇಡ್ ತೆರವು ಮಾಡಲಾಯಿತು. ಈ ಹಂತದಲ್ಲಿ ಕೆಲಕಾಲ ಸಾರ್ವಜನಿಕ ವಾಹನಗಳಿಗೆ ಅಡೆತಡೆ ಉಂಟಾಯಿತು. ಬಿಗಿ ಪೊಲೀಸ್ ಬಂದೋಬಸ್ತ ಹಾಕಲಾಗಿತ್ತು.