RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ: ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ನಗರಕ್ಕೆ ಬಂದ 71 ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್ ಟೇಸ್ಟ : ಒಬ್ಬರಿಗೆ ಕೊರೋನಾ ದೃಢ

ಗೋಕಾಕ: ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ನಗರಕ್ಕೆ ಬಂದ 71 ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್ ಟೇಸ್ಟ : ಒಬ್ಬರಿಗೆ ಕೊರೋನಾ ದೃಢ 

ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ನಗರಕ್ಕೆ ಬಂದ 59 ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್ ಟೇಸ್ಟ : ಒಬ್ಬರಿಗೆ ಕೊರೋನಾ ದೃಢ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 27 :

 
ಕೋರೋನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿರುವದರಿಂದ ಇಂದಿನಿಂದ 14 ದಿನಗಳ ಕಾಲ ಸರಕಾರ ರಾಜ್ಯಾದ್ಯಂತ ಬೀಗಿ ಕ್ರಮಕ್ಕೆ ಮುಂದಾಗಿದೆ. ಇದರ ಮುಂದುವರಿದ ಭಾಗವಾಗಿ ಗೋಕಾಕ ನಗರದ ಟಾಸ್ಕ್ ಪೋರ್ಸ ತಂಡದ ಅಧಿಕಾರಿಗಳು ಮಂಗಳವಾರದಂದು ಮುಂಜಾನೆ ಬೆಂಗಳೂರಿನಿಂದ ನಗರಕ್ಕೆ ಬಂದ ಪ್ರಾಯಾಣಿಕರನ್ನು ನಗರದ ಹೊರ ವಲಯದಲ್ಲಿ ತಡೆದು ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟ ಘಟನೆ ಜರುಗಿದೆ.

ಬೆಂಗಳೂರಿನಿಂದ ಸಂಜನಾ, ಸುಗುಮಾ ಹಾಗೂ ವಿ.ಆರ್.ಎಲ್,ಎಸ್.ಆರ್.ಎಸ್  ಟ್ರಾವೆಲ್ ನಲ್ಲಿ ಗೋಕಾಕಕ್ಕೆ ಬಂದ 71 ಆರ್.ಟಿ.ಪಿ.ಸಿ.ಆರ್ ತಪಾಸಣೆ ನಡೆಸಿದವರಲ್ಲಿ ಸಂಜನಾ ಟ್ರಾವೆಲ್ ನ ಚಾಲಕನಿಗೆ ಕೋರೋನಾ ಪಾಸಿಟಿವ್ ಕಂಡು ಬಂದಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಬೆಂಗಳೂರು ಮಹಾನಗರದಲ್ಲಿ ಕೋರೋನಾ ಮಹಾಮಾರಿ ಅತಿ ವೇಗದಿಂದ ಹರಡುತ್ತಿದ್ದು, ಸರಕಾರ ಮಂಗಳವಾರದಿಂದ ಬರುವ 14 ದಿನಗಳ ಕಾಲ ಸಂಪೂರ್ಣ ರಾಜ್ಯವನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಆದೇಶಿಸಿರುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ನಾವು ಬೆಂಗಳೂರಿನಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಿ ನಗರದ ಒಳಗೆ ಬಿಡುತ್ತಿದ್ದು, ಇಂದು ಒಟ್ಟು  71 ಜನ ಪ್ರಯಾಣಿಕರನ್ನು ತಪಾಸಣೆ ಒಳಪಡಿಸಿದ್ದು, ಅದರಲ್ಲಿ ಒಬ್ಬರಿಗೆ ಕೋರೋನಾ ದೃಢಪಟ್ಟಿದೆ. ತಪಾಸಣೆಗೆ ಒಳಗಾದ ಎಲ್ಲಾ ಪ್ರಯಾಣಿಕರಿಗೆ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದ್ದು, ಈ ಕಾರ್ಯಾಚರಣೆ ನಾಳೆಯು ಮುಂದುವರೆಸಲಾಗುವುದು ಎಂದು ತಿಳಿಸಿದರು.

ಲಾಕಡೌನ ನೆಪದಲ್ಲಿ ಗುಟಕಾ ,ಸಿಗರೇಟ್ ಹೋಲಸೇಲ್ ವ್ಯಾಪಾರಸ್ಥರು ಗ್ರಾಹಕರಿಂದ ಹೆಚ್ಚಿನ ಬೆಲೆ ತಗೆದುಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಕಾನೂನು ಬಾಹಿರ ಕ್ರಮವಾಗಿದ್ದು, ನಗರದಲ್ಲಿ ಸಂಚರಿಸಿ ಅಂತಹ ವ್ಯಾಪಾರಸ್ಥರ ವಿರುದ್ಧ ಕಠಿಣವಾದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಡಾ.ರವೀಂದ್ರ ಅಂಟಿನ್, ನಾಗಪ್ಪ ಶೇಖರಗೋಳ, ಎಂ.ಎಚ್.ಗಜಾಕೋಶ, ಜೆ.ಸಿ.ತಾಂಬೂಳೆ, ಕೆ.ಎಸ್.ಕೋಳಿ ಇದ್ದರು.

Related posts:

ಬೆಳಗಾವಿ :ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಜಿಲ್…

ಬೆಂಗಳೂರು:ಪ್ರಧಾನಿ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಲ್ಲ ಕ್ಷೇತ್ರಗಳಿಗೂ ಅನುಕೂಲ : ಕೆಎಂಎಫ್ ಅಧ…

ಮೂಡಲಗಿ:ಅರಭಾವಿ, ಕಲ್ಲೋಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 143 ಕೋಟಿ ರೂ : ಶಾಸಕ ಬಾಲಚಂದ್ರ…