ಗೋಕಾಕ:ಸ್ಕ್ಯಾನಿಂಗ್ ಸೆಂಟರಗಳಿಗೆ ಭೇಟಿ : ಹೆಚ್ಚಿನ ದರ ವಸೂಲಿ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ : ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದ ವೈದ್ಯೆ
ಸ್ಕ್ಯಾನಿಂಗ್ ಸೆಂಟರಗಳಿಗೆ ಭೇಟಿ : ಹೆಚ್ಚಿನ ದರ ವಸೂಲಿ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ : ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದ ವೈದ್ಯೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 12 :
ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ ಹಾಗೂ ಕರೋನಾ ರೋಗಿಗಳಿಂದ ಹೆಚ್ಚಿನ ದರ ವಸೂಲಿ ಮಾಡುಲಾಗುತ್ತಿದ್ದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಟಾಸ್ಕ ಪೋರ್ಸ ಸಮಿತಿಯ ಕೆಲ ಅಧಿಕಾರಿಗಳು ನಗರದ ಸ್ಕ್ಯಾನಿಂಗ್ ಸೆಂಟರಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರದದಂದು ನಗರದ ಉಪ್ಪಿನ ಸ್ಕ್ಯಾನಿಂಗ್ ಸೆಂಟರ್, ಗರೋಶಿ ಸ್ಕ್ಯಾನಿಂಗ್ ಸೆಂಟರ ಹಾಗೂ ಗಂಗಾ ಸ್ಕ್ಯಾನಿಂಗ್ ಸೆಂಟರಗಳಿಗೆ ಭೇಟಿ ನೀಡಿದ ಟಾಸ್ಕ ಪೋರ್ಸ ಸಮಿತಿಯವರು ಸ್ಕ್ಯಾನಿಂಗ್ ಸೆಂಟರಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲದನ್ನು ಕಂಡು ಕೆಂಡಾಮಂಡಳವಾಗಿ ಅಲ್ಲಿನ ವೈದ್ಯರಿಗೆ ಸಾಮಾಜಿಕ ಅಂತರ ಹಾಗೂ ಸರಕಾರ ನಿಗದಿ ಪಡಿಸಿರುವ ದರಗಿಂತ ಹೆಚ್ಚಿನ ದರ ವಸೂಲಿ ಮಾಡಬಾರದು ಹಾಗೂ ಸರಕಾರ ನಿಗದಿ ಪಡಿಸಿರುವ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಫಲಕವನ್ನು ಹಾಕಬೇಕು ಒಂದು ವೇಳೆ ಈ ಸೂಚನೆಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಅಂತಹ ಸ್ಕ್ಯಾನಿಂಗ್ ಸೆಂಟರಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಎಚ್ಚರಿಕೆ ನೀಡಿದರು.
ವಾಗ್ವಾದಕ್ಕೆ ಇಳಿದ ವೈದ್ಯೆ : ಸ್ಕ್ಯಾನಿಂಗ್ ಸೆಂಟರಗಳಿಗೆ ಭೇಟಿ ನೀಡಿ ಪರಿಶೀಲಿಸುವ ಸಂಧರ್ಭದಲ್ಲಿ ನಗರದ ಗಂಗಾ ಸ್ಕ್ಯಾನಿಂಗ್ ಸೆಂಟರಗೆ ಬೇಟಿ ನೀಡಿದ್ದ ಸಂಧರ್ಭದಲ್ಲಿ ಗಂಗಾ ಸ್ಕ್ಯಾನಿಂಗ್ ಸೆಂಟರನ ವಿಕಿರಣಶಾಸ್ತ್ರಜ್ಞ ಡಾ. ಶೀತಲ ಚೇತನ ಉಮರಾಣಿ ಅವರು ಟಾಸ್ಕ ಪೋರ್ಸ ಸಮಿತಿಯ ಜೊತೆಗೆ ವಾಗ್ವಾದಕ್ಕೆ ಇಳಿದ ಘಟನೆ ಜರುಗಿತು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ನಂತರ ಟಾಸ್ಕ ಪೋರ್ಸ ಸಮಿತಿಯ ಸದಸ್ಯರು ತಾವು ಬಂದ ವಿಷಯದ ಬಗ್ಗೆ ತಿಳಿಸಿ ಹೇಳಿದ ನಂತರ ಸಮಾಧಾನ ಗೊಂಡ ವೈದ್ಯೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಾಗಿ ಒಪ್ಪಿಕೊಂಡ ಘಟನೆ ಜರುಗಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ಪಿಎಸ್ಐ ಕೆ.ವಾಲಿಕರ, ಎಂ.ಎಚ್.ಗಜಾಕೋಶ, ಜಯೇಶ ತಾಂಬೂಳೆ ಇದ್ದರು.