RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವಿರೋಧ ಪಕ್ಷದವರು ಸರಕಾರದ ಕ್ರಮ ಖಂಡಿಸು ವುದನ್ನು ಬಿಟ್ಟು ಸೂಕ್ತ ಸಲಹೆ ನೀಡಲಿ : ಶಾಸಕ ರಮೇಶ

ಗೋಕಾಕ:ವಿರೋಧ ಪಕ್ಷದವರು ಸರಕಾರದ ಕ್ರಮ ಖಂಡಿಸು ವುದನ್ನು ಬಿಟ್ಟು ಸೂಕ್ತ ಸಲಹೆ ನೀಡಲಿ : ಶಾಸಕ ರಮೇಶ 

ವಿರೋಧ ಪಕ್ಷದವರು ಸರಕಾರದ ಕ್ರಮ ಖಂಡಿಸು ವುದನ್ನು ಬಿಟ್ಟು ಸೂಕ್ತ ಸಲಹೆ ನೀಡಲಿ : ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 15 :

 
ಕರೋನಾ ಎರೆಡೆನೇ ಲಸಿಕೆ ನೀಡಲು ಸರಕಾರ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದು ವಿರೋಧ ಪಕ್ಷದವರು ಸಲಹೆ ನೀಡುವುದನ್ನು ಬಿಟ್ಟು ಸರಕಾರದ ಕೊರೋನಾ ಕ್ರಮಗಳನ್ನು ಖಂಡಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು

ಶನಿವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ಧೇಶಿಸಿ ಅವರು ಮಾತನಾಡಿದರು

ಕೊರೋನಾ ಸೋಂಕು ವ್ಯವಸ್ಥವಾಗಿ ತಡೆಗಟ್ಟಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೊರೋನಾ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸರಕಾರಿ ಹಾಗೂ ಖಾಸಗಿ ವೈದ್ಯರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕೊರೋನಾದಿಂದ ಮೃತಪಟ್ಟರ ಅಂತ್ಯ ಸಂಸ್ಕಾರ ಮಾಡುತ್ತಿರುವ ಸಂಘ ಸಂಸ್ಥೆಯವರಿಗೆ ಪಿಪಿ ಕಿಟ್ಟ ಸಮಸ್ಯೆಯಾಗುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇದು ನಮ್ಮ ಗಮನಕ್ಕೆ ಬಂದಿದ್ದು ಸಾರ್ವಜನಿಕ ಆಸ್ಪತ್ರೆಯಿಂದ ಪೂರೈಸಲು ವ್ಯವಸ್ಥೆ ಮಾಡುವಂತೆ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಮಿ ಲಾಕಡೌನ ವಿಸ್ತರಿಸುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಲಾಕಡೌನ ವಿಸ್ತರಿಸುವುದು ಸೂಕ್ತ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ ಅವರು ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರವನ್ನು ಪಡೆಯುತ್ತಿದ್ದಾರೆ ಎಂದು ತಮ್ಮ ಕಾರ್ಯಾಲಯಕ್ಕೆ ದೂರುಗಳು ಬಂದಿದ್ದು ಯಾರಿಂದಲೂ ಹೆಚ್ಚಿನ ದರ ಸ್ವೀಕರಿಸಿದೆ ಸರಕಾರ ನಿಗದಿ ಪಡಿಸಿದ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಆಸ್ಪತ್ರೆಯಲ್ಲಿ ಫಲಕ ಹಾಕುವಂತೆ ಸೂಚಿಸಲಾಗಿದೆ ಎಂದು ರಮೇಶ ಜಾರಕಿಹೊಳಿ ಅವರು ಹೇಳಿದರು.

Related posts: