RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ

ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ 

ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :

 

ಕಳೆದ ನವೆಂಬರ ತಿಂಗಳಲ್ಲಿ ಗೋಕಾಕ ಡಿ.ವೈ.ಎಸ್.ಪಿ ಯಾಗಿ ಬಂದಿದ್ದ ವಿಜಯಪುರ ಜಿಲ್ಲೆಯ ಶೆಗುಣಶಿ ಗ್ರಾಮದ ಜಾವೇದ ಇನಾಂದಾರ ತಮ್ಮ ಸ್ವ- ಗ್ರಾಮ ದಲ್ಲಿ ತನಗಾದ ಅವಮಾನಗಳನ್ನು ಗೆದ್ದು ಡಿ.ವೈ.ಎಸ್‌.ಪಿ ಹುದ್ದೆಗೆ ಏರಿ ಗ್ರಾಮದ ಜನರ ಹುಬ್ಬೇರಿಸಿದರು ಇವರ ಈ ಡಿಟ್ಟ ಕ್ರಮದಿಂದ ಅವರಿಗೆ ಅವಮಾನ ಮಾಡಿದ ಗ್ರಾಮದ ಜನರಿಂದಲೇ ಸತ್ಕಾರ ಮಾಡಿಸಿಕೊಂಡು ಶೆಗುಣಶಿ ಗ್ರಾಮದ ಜನರು ಅವರ ಮುಂದೆ ತಲೆತಗ್ಗಿಸುವಂತೆ ಮಾಡಿದ್ದರು. ಶೆಗುಣಶಿ ಗ್ರಾಮದ ಜನರು ಇವರ ಪರಿಶ್ರಮ ಮತ್ತು ಬುದ್ಧಿವಂತಿಕೆಗೆ ಬೇಷ್ ಎಂದಿದ್ದರು. ಆದರೆ ಇದಾಗಿ ಕೆಲ ವರ್ಷಗಳು ಕಳೆಯುವಷ್ಟರಲ್ಲಿ ಅವರ ಸ್ವ-ಗ್ರಾಮವಷ್ಟೆ ಅಲ್ಲಾ ಇಡೀ ರಾಜ್ಯ ತಲೆತಗ್ಗಿಸುವಂತಾ ಪ್ರಕರಣದಲ್ಲಿ ಸಿಲುಕಿರುವ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಗ್ರಾಮದವರು ಮಾಡಿದ ಪ್ರೀತಿಯ ಸತ್ಕಾರಕ್ಕೆ ಅಪಕೀರ್ತಿ ತಂದಿದ್ದಾರೆ. ಏನಿದು ಪ್ರಕರಣ ಅಂತಿರಾ ಹಾಗಾದರೆ ಈ ಸ್ಟೋರಿ ಸ್ವಲ್ಪ ಓದಿ : 2020 ಜನೇವರಿ 9 ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ದಾಖಲೆ ಇಲ್ಲದೆ ಮಂಗಳೂರಿನಿಂದ ಗೋಲ್ಡ್ ಸಾಗಿಸುತ್ತಿದ್ದು ಚೆಕ್ ಮಾಡುವಂತೆ ಸೂಚಿಸಿದ್ದಾರೆ ಕೂಡಲೇ ಯಮಕನಮರಡಿ ಪೊಲೀಸರು ಹತ್ತರಕ್ಕಿ ಟೋಲ್ ಬಳಿ ಹೋಗಿ ತಪಾಸಣೆ ಮಾಡಿದ್ದಾರೆ ಆದರೆ ಈ ಕಾರಿನಿಂದ ಯಾವುದೆ ತೆರನಾದ ಚಿನ್ನ ಸಿಕ್ಕಿಲ್ಲ ಇದರಿಂದ ಹತಾಶಯಕ್ಕೆ ಒಳಗಾದ ಪೊಲೀಸರು ಕಾರು ಮೋಡಿಫ್ಯ್ ಮಾಡಿದ್ದನ್ನು ಕಂಡು 96ಕೆ.ಪಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡು ಕಾರು ಸಿಜ್ ಮಾಡಿದ್ದಾರೆ. ಇಷ್ಟಕ್ಕೆ ಮುಗಿಯದ ಈ ಪ್ರಕರಣ ಮುಂದೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಕಾರು ಬಿಡಿಸಲು 60 ಲಕ್ಷ ಡಿಮ್ಯಾಂಡ್ : ಯಮಕನಮರಡಿ ಠಾಣೆಯಲ್ಲಿ ಸಿಜ್ ಆಗಿರುವ ಕಾರನ್ನು ಬಿಡಿಸಿಕೊಡಲು ಕಾರು ಮಾಲಿಕ ತೀಲಕಗೆ ಕಿರಣ ಎಂಬಾತ 60 ಲಕ್ಷ ರೂಗಳಿಗೆ ಡಿಮ್ಯಾಂಡ್ ಮಾಡಿದ್ದಾಗ ಕೊನೆಗೆ 30 ಲಕ್ಷರೂಗೆ ಈ ಡಿಲ್ ಪೈನಲ್ ಆಗಿ ಅಡ್ವಾನ್ಸ್ ಕಿರಣ ಎಂಬಾತನಿಗೆ 25 ಲಕ್ಷರೂ ಸಂದಾಯವಾಗಿವೆ.ಈ ಬಳಿಕ ಕಿರಣ ಎಂಬಾತನು ಹಿರಿಯ ಪೊಲೀಸ ಅಧಿಕಾರಿಯೊಬ್ಬರಿಗೆ ಪೋನ ಮಾಡಿ ಸಿಜ್ ಆದ ಕಾರನ್ನು ಬಿಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇವನ ಮನವಿಗೆ ಹಿರಿಯ ಅಧಿಕಾರಿಯೊಬ್ಬರು ಯಮಕನಮರಡಿ ಠಾಣೆಗೆ ಕರೆಮಾಡಿ ಕಾರು ಬಿಡುವಂತೆ ಆದೇಶ ಮಾಡಿದ್ದಾರೆ ಆದರೆ ಪ್ರಕರಣ ದಾಖಲಾಗಿದ್ದರಿಂದ ಕಾರನ್ನು ಕೋರ್ಟ್ ನಿಂದ ಬಿಡಿಸಿಕೊಳ್ಳುವಂತೆ ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ್ ಹೇಳಿದ್ದಾರೆ. ಕಾರು ಕದಿಯಲು ಪ್ಲ್ಯಾನ್ : ಗೋಕಾಕ ಡಿವೈಎಸಪಿ ಜಾವೇದ ಇನಾಂದಾರ  ಪ್ಲ್ಯಾನ ಮಾಡಿ ಕಾರು ಮಾಲಿಕ ತೀಲಕ್ ಮಿಡಿಟರ್ ಕಿರಣ ಫೆಬ್ರವರಿ 28 ರ ಮಧ್ಯರಾತ್ರಿ ಕಾರು ಕದಿಯೊಕ್ಕೆ ಮುಂದಾಗಿ ಚಾಲಕ ಒಬ್ಬನನ್ನು ಕಳುಹಿಸಿದ್ದಾರೆ ಆದರೆ ಕಾರು ಜೋರಾಗಿ ಶಬ್ದ ಮಾಡಿದ್ದರಿಂದ ಚಾಲಕ ಬೆದರಿ ಅಲ್ಲಿಂದ ಫರಾರಿಯಾಗಿದ್ದಾನೆ. ಕಾರಿನ ಏರಬ್ಯಾಗನಲ್ಲಿ 4 ಕೆಜಿ 900 ಗ್ರಾಂ ಚಿನ್ನ: ಕಾರು ಕೊಡಿಸಲು ಮುಂದಾಗಿದ್ದ ಡಿಲರ್ ಕಿರಣಗೆ ಕಾರಿನ ಏರಬ್ಯಾಗನಲ್ಲಿ 2.5 ಕೋಟಿಯ 4ಕೆಜಿ 900 ಗ್ರಾಂ ಚಿನ್ನ ಅಡಗಿಸಿ ಇಟ್ಟಿರುವದು ಗೊತ್ತಾಗಿದೆ. ಆಗ ಕಿರಣ ಗೋಕಾಕ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಜೊತೆಗೆ ಸೇರಿ ಚಿನ್ನ ಲಪಟಾಯಿಸಿ ಹುಬ್ಬಳ್ಳಿಯ ಚಿನ್ನದ ವ್ಯಾಪಾರಿಯೊಬ್ಬರಿಗೆ ಮಾರಿ ಹಣ ಪಡೆದು ಹಾಯಾಗಿ ತಿರುಗಾಡಿದ್ದಾರೆ. ಬಳಿಕ 2020 ಏಪ್ರಿಲ್ 16 ರಂದು ಕಾರು ಮಾಲಿಕ ತಿಲಕ್ ಪೂಜಾರಿ ಕೋರ್ಟ್ ಗೆ ದಂಡ ತುಂಬಿ ಕಾರನ್ನು ಬಿಡುಗಡೆ ಮಾಡಿಕೊಂಡಾಗ ಕಾರಿನಲ್ಲಿದ್ದ 2.5 ಕೋಟಿ ಬೆಲೆ ಬಾಳುವ ಚಿನ್ನ ಮಾಯವಾಗಿದನ್ನು ಗಮನಿಸಿ ಕೂಡಲೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸಗೆ ದೂರು ನೀಡಿದ್ದಾರೆ. ಎಸ್.ಪಿ ನಿಂಬರಗಿ ತನಿಖೆಯಲ್ಲಿ ಬಯಲಾಯ್ತು ಜಾವೇದನ ಗೋಲ್ಡ್ ಪುರಾಣ : ಕಾರಿನಲ್ಲಿದ್ದ ಚಿನ್ನ ಮಾಯವಾಗಿರುವ ಬಗ್ಗೆ ದೂರು ದಾಖಲಾದ ನಂತರ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಅವರು ಈ ಪ್ರಕರಣದ ಜವಾಬ್ದಾರಿಯನ್ನು ಬೆಳಗಾವಿ ಪೋಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ವಹಿಸಿ ತನಿಖೆ ಮಾಡುವಂತೆ ಸೂಚಿಸಿದ್ದಾರೆ ಆಗ ಖಾಕಿ ಕಳ್ಳಾಟ ಬಯಲಿಗೆ ಬಂದಿದೆ. ಎಸ್.ಪಿ ನಿಂಬರಗಿ ಅವರು ನಡೆಸಿದ ತನಿಖೆಯಲ್ಲಿ ಡಿಲರ್ ಕಿರಣ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಜೊತೆಗೂಡಿ ಯಮಕನಮರಡಿ ಠಾಣೆಯ ಪಿಎಸ್ಐ ರಮೇಶ ಪಾಟೀಲ್, ಒರ್ವ ಪೇದೆ ಹಾಗೂ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರ ಕೈವಾಡ ಇರುವದು ಪತ್ತೆಯಾಗಿದೆ. ಆರೋಪಿ ಕಿರಣ ಹಾಗೂ ಹಿರಿಯ ಅಧಿಕಾರಿಯೊಬ್ಬರು ನಡೆಸಿರುವ ಸಂಭಾಷಣೆಯೂ ಸಹ ಎಸ್.ಪಿ ನಿಂಬರಗಿ ಅವರಿಗೆ ದೊರೆತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದ್ದು ತನಿಖೆ ಚುರುಕುಗೊಂಡಿದ್ದು ಸದ್ಯದಲ್ಲೇ ಗೋಲ್ಡ್ ಕದ್ದ ಖಾಕಿ ಮುಖಗಳು ಬಟಾ ಬಯಲಾಗಲಿವೆ ರಾತ್ರೋರಾತ್ರಿ ಜಾವೇದ ಸೇರಿ ಹಲವರ ವರ್ಗಾವಣೆ : ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆ ತಕ್ಷಣದಲ್ಲಿ ಜಾರಿಗೆ ಬರುವಂತೆ ಗೋಕಾಕ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಅವರಿಗೆ ಐ.ಎಸ್.ಡಿ ಗೆ ವರ್ಗಾವಣೆ ಮಾಡಿದೆ. ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಗೆ ಪಿ .ಟಿ.ಎಸ್. ಹುಬ್ಬಳ್ಳಿ-ಧಾರವಾಡ,ಗೆ ಮತ್ತು ಪಿಎಸ್ಐ ರಮೇಶ ಪಾಟೀಲ್ ಅವರಿಗೆ ಸಿ.ಎನ್.ಎ ಪೊ.ಠಾ ಹುಬ್ಬಳ್ಳಿ – ಧಾರವಾಡ ಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ ಗೋಲ್ಡ್ ಆರೋಪ ಹೊತ್ತಿರುವ ಈ ಅಧಿಕಾರಿಗಳು ಸಿಐಡಿ ತನಿಖೆಯಾಗುವವರೆಗೆ ಅಮಾನತಿನಲ್ಲಿದ್ದು ತನಿಖೆ ಎದುರಿಸಬೇಕಾಗುತ್ತದೆ . ಆದರೆ ಜಿಲ್ಲೆಯಲ್ಲಿ ಮುಜುಗರ ತಪ್ಪಿಸಲು ಇಲಾಖೆ ಈ ವರ್ಗಾವಣೆ ಆದೇಶ ಮಾಡಿದೆ ಎಂದು ಜಿಲ್ಲೆಯ ಜನರು ಮಾತನಾಡುತ್ತಿದ್ದಾರೆ ಇನ್ನೆರಡು ದಿನಗಳಲ್ಲಿ ಇವರ ಅಮಾನತು ಆದೇಶ ಕೂಡಾ ಹೊರಬಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ . ಇವರ ಈ ಘನಾಮದಾರಿ ಕೆಲಸಕ್ಕೆ ಸ್ವ-ಗ್ರಾಮ ಹಾಗೂ ಗೋಕಾಕ ಉಪ ವಿಭಾಗದ ಜನರು ಕೇಳು ಪ್ರಶ್ನೆ ಇಷ್ಟೆಲ್ಲಾ ಬೇಕಿತಾ ಸಾಬ್..

Related posts: