ಗೋಕಾಕ:ಜಿಲ್ಲೆಯಾದ್ಯಂತ ಅವಶ್ಯಕತೆಗಣುಗುಣವಾಗಿ ಪಿಪಿ ಕಿಟ್ , ಮಾಸ್ಕ , ಸಾನಿಟೈಜರ್ ವಿತರಣೆ : ಶಾಸಕ ಸತೀಶ ಜಾರಕಿಹೊಳಿ
ಜಿಲ್ಲೆಯಾದ್ಯಂತ ಅವಶ್ಯಕತೆಗಣುಗುಣವಾಗಿ ಪಿಪಿ ಕಿಟ್ , ಮಾಸ್ಕ , ಸಾನಿಟೈಜರ್ ವಿತರಣೆ : ಶಾಸಕ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 23 :
ಜಿಲ್ಲೆಯಾದ್ಯಂತ ಅವಶ್ಯಕತೆ ಅನುಗುಣವಾಗಿ ಪಿಪಿ ಕಿಟ್ , ಮಾಸ್ಕ , ಸಾನಿಟೈಜರ್ ಗಳನ್ನು ತಮ್ಮ ಅಂಗ ಸಂಸ್ಥೆಗಳಾದ ಸತೀಶ ಶುಗರ್ಸ ಲಿಮಿಟೆಡ್ ಹಾಗೂ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೊದಲ ಹಂತವಾಗಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಆರೋಗ್ಯ ಇಲಾಖೆ, ಪೊಲೀಸ ಇಲಾಖೆ , ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಮಾಸ್ಕ, ಸಾನಿಟೈಜರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಲಾಗಿದ್ದು, ಎರಡನೇ ಹಂತದಲ್ಲಿ ಯಮಕನಮರಡಿ ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಸೋಮವಾರದಿಂದ ನಮ್ಮ ಕಾರ್ಯಕರ್ತರು 2,500 ಮಾಸ್ಕ, ಸಾನಿಟೈಜರ್ ಹಾಗೂ ಪಿಪಿ ಕಿಟಗಳನ್ನು ವಿತರಿಸಲಿದ್ದು, ಈ ನಮ್ಮ ಕಾರ್ಯ ಅವಶ್ಯಕತೆಗಣುಗುಣವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವದು ಎಂದ ಅವರು ಸರಕಾರ ಕೋರೋನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಲಸಿಕೆ ಪಡೆಯಲು ಸಂಗ್ರಹಿಸಿದಂತಹ ಅನುದಾನವನ್ನು ಪಡೆಯಲು ಹಿಂದೆಟ್ಟು ಹಾಕುತ್ತಿದೆ. ಲಸಿಕೆ ಹಾಗೂ ಆಕ್ಸಿಜನ ಕೊರತೆಯಿಂದ ರಾಜ್ಯದ ಜನರು ಇಂದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಉಸ್ತುವಾರಿ ಸಚಿವರುಗಳು ಜಿಲ್ಲೆಯಾದ್ಯಂತ ಕಾರ್ಯಮಾಡದೆ ತಮ್ಮ ಸ್ವ- ಕ್ಷೇತ್ರಗಳಿಗೆ ಮಾತ್ರ ಸಿಮಿತವಾಗಿ ಕಾರ್ಯ ಮಾಡುತ್ತಿರುವದರಿಂದ ಆಯಾ ಜಿಲ್ಲೆಯಲ್ಲಿ ಸೋಂಕು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಯಾಗುತ್ತಿಲ್ಲ ಸರಕಾರ ಹಾಗೂ ಸಚಿವರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಮಾಡಿದರೆ ಸೋಂಕು ನಿಂಯತ್ರಣ ಸಾಧ್ಯ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಕಾಂಗ್ರೆಸ್ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಬೀಮ್ಸ ಆಸ್ಪತ್ರೆಗೆ ಭೇಟಿ ನೀಡಿ ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ಪಡೆದು ಹಿಂದೆ ಕಾಂಗ್ರೆಸ್ ಪಕ್ಷದಿಂದ ನೀಡಿದ ಸಲಹೆಗಳ ಬಗ್ಗೆ ಹಾಗೂ ಅವುಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುವದು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ತಿಳಿಸಿದರು.