ಗೋಕಾಕ:ಲಖನ್ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದಿಂದ ಉಪಹಾರ ವಿತರಣೆ
ಲಖನ್ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದಿಂದ ಉಪಹಾರ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ, 11 :
ಯುವ ಧುರೀಣರು ಹಾಗೂ ಇಲ್ಲಿಯ ಮಯೂರ ಆಂಗ್ಲ ಮಾದ್ಯಮ ಶಾಲೆಯ ಚೇರಮನ್ನರೂ ಆದ ಲಖನ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದವರು ಶುಕ್ರವಾರದಂದು ನಗರದಲ್ಲಿ ರೋಗಿಗಳು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಅಲೆಮಾರಿ ಜನಾಂಗದವರಿಗೂ ಉಪಹಾರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ಡಾ. ಆರ್.ಎಸ್.ಬೆಣಚಿನಮರಡಿ, ಲಖನ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಸದಾ ಕಲಾಲ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಸಂತೋಷ ಮಂತ್ರಣ್ಣವರ, ಹರೀಶ ಬೂದಿಹಾಳ ಹಾಗೂ ಅಭಿಮಾನಿ ಬಳಗದ ಸಂಜಯ ಜಡೆನ್ನವರ, ಬಸವರಾಜ ದೇಶನೂರ, ಅನೀಲ ಮುರಾರಿ, ವಿಜಯ ಅರಭಾಂವಿ, ವಿಜಯ ಜತ್ತಿ, ಬಸವರಾಜ ಮಾಳಗಿ, ಭೀಮಶಿ ಖಾನಪ್ಪನವರ, ದೇವಾನಂದ ಕಂಬಾರ, ದರ್ಶನ ತುರಾಯಿದಾರ, ಧರೀಶ ಕಲಘಾಣ, ಬಸವರಾಜ ಶೇಗುಣಶಿ, ಮಂಜುನಾಥ ತುರಾಯಿದಾರ, ಮಹೇಶ ಪಾಟೀಲ, ಶಿವು ಜಂಬಗಿ, ಪ್ರವೀಣ ಚುನಮರಿ , ಆನಂದ ಮಗದುಮ್ಮ, ವಿನೂತ ಜತ್ತಿ, ಸಚೀನ ಮಗದುಮ್ಮ ವಿನಾಯಕ ಕುರಬೇಟ ಸೇರಿದಂತೆ ಅನೇಕರು ಇದ್ದರು.