ಘಟಪ್ರಭಾ:ಘಟಪ್ರಭಾ ಮತ್ತು ಧುಪದಾಳ ಗ್ರಾಮ ಸಂಪೂರ್ಣ ಸೀಲ್ ಡೌನ
ಘಟಪ್ರಭಾ ಮತ್ತು ಧುಪದಾಳ ಗ್ರಾಮ ಸಂಪೂರ್ಣ ಸೀಲ್ ಡೌನ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 13 :
ಒಂದು ವಾರದಲ್ಲಿ 22 ಕೋವಿಡ್ ಪಾಸಿಟಿವ ಪ್ರಕರಣಗಳು ಪತ್ತೆಯಾದ ಕಾರಣ ಘಟಪ್ರಭಾ ಪಟ್ಟಣ ಮತ್ತು ಧುಪದಾಳ ಗ್ರಾಮವನ್ನು ರವಿವಾರ ಸಂಪೂರ್ಣ ಸೀಲ್ ಡೌನ ಮಾಡಲಾಗಿದೆ.
ಐದಕ್ಕೂ ಹೆಚ್ಚು ಪಾಸಿಟಿವ ಪ್ರಕರಣಗಳು ಪತ್ತೆಯಾದ ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿರುವ ಬೆನ್ನಲೇ ಘಟಪ್ರಭಾ ಪಟ್ಟಣ ಮತ್ತು ಧುಪದಾಳ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ ಅಧಿಕಾರಿಗಳು ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.
ಘಟಪ್ರಭಾದಲ್ಲಿ 14 ಮತ್ತು ಧುಪದಾಳದಲ್ಲಿ 8 ಪ್ರಕರಣ ಪತ್ತೆಯಾಗಿವೆ. ಸ್ಥಳೀಯ ಮೃತ್ಯುಂಜಯ ವೃತ್ತ ಹಾಗೂ ಕೊಣ್ಣೂರ-ದುಪದಾಳ ರಸ್ತೆಯನ್ನು ಸೀಲ್ ಮಾಡಲಾಗಿದೆ. ಸೊಂಕಿತರ ಮನೆಗಳನ್ನು ಸೀಲ್ ಡೌನ ಮಾಡಿ ಯಾರೂ ಹೊರಗೆ ಬಾರದಂತೆ ಸೂಚಿಸಲಾಗಿದೆ. ಅನಗತ್ಯ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಸೋಮವಾರ ಸೀಲ್ ಡೌನ್ ಮಾಡಲಾಗಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಭೆಟ್ಟಿ ನೀಡುವ ಸಾದ್ಯತೆಗಳಿರುವುದರಿಂದ ಗೋಕಾಕ ತಹಶೀಲ್ದಾರರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆಂದು ತಿಳಿದುಬಂದಿದೆ.