RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯ : ಶಾಸಕ ರಮೇಶ

ಗೋಕಾಕ:ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯ : ಶಾಸಕ ರಮೇಶ 

ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯ : ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 16 :

 
ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಸ್ಥಳೀಯ ರಾಕೆಟ್ ಇಂಡಿಯಾ ಪೈ.ಲಿಮಿಟೆಡ್ ನವರ ನೀಡಿದ ಐಸಿಯು ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊರೋನಾ ಎರಡನೇ ಅಲೆ ಸಂಪೂರ್ಣ ಇಳಿಮುಖ ವಾಗುತ್ತಿದೆ ಎಂದು ತಿಳಿದು ಯಾರು ಕೂಡಾ ಮೈಮರೆಯದೆ ಜಾಗೃತಿರಾಗಿದ್ದು, ಮಾಸ್ಕ ,ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ನಿಯಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯ ಪ್ರವೃತ್ತವಾಗಬೇಕು ಅಂದಾಗ ಮಾತ್ರ ನಾವು ಮೂರನೇ ಅಲೆಯನ್ನು ಸರ್ಮರ್ಥವಾಗಿ ಎದುರಿಸಲು ಸಾಧ್ಯ ಎಂದ ಅವರು ಆರೋಗ್ಯ ಇಲಾಖೆಯ ಕೈಗೊಳ್ಳಲುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆಂಬಲ ವಿದ್ದು . ಈಗಾಗಲೇ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಮಾತನಾಡಿ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಮಾಡಲು ಪ್ರಯತ್ನಿಸಲಾಗುವದು.

ಗೋಕಾಕ ಸರಕಾರಿ ಆಸ್ಪತ್ರೆಗೆ ರಾಜ್ಯದಲ್ಲಿ ಉತ್ತಮ ಹೆಸರಿದ್ದು ಇದಕ್ಕೆ ಡಿ.ದರ್ಜೆಯ ನೌಕರರರಿಂದ ಹಿಡಿದ ಎಲ್ಲ ಉನ್ನತ ಮಟ್ಟದ ಅಧಿಕಾರಿಗಳ ಸಹಕಾರ ಮುಖ್ಯ ವಾಗಿದೆ. ಇದರ ಪರಿಣಾಮವಾಗಿ ಕೊರೋನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಿಟ್ಟು ಸೋಂಕಿತರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವದು ಇಲ್ಲಿನ ವೈದ್ಯರ ಹಾಗೂ ಸಿಬ್ಬಂದಿಯ ಪರಿಶ್ರಮಕ್ಕೆ ಸಾಕ್ಷೀಯಾಗಿದೆ ಎಂದ ಆವರು ಇಲ್ಲಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ರಾಕೇಟ ಇಂಡಿಯಾ ಪೈ.ಲಿಮಿಟೆಡ್ ನ ಜನರಲ್ ಮ್ಯಾನೇಜರ್ ರಾಜೇಂದ್ರ ಆಚಾರ್ಯ, ಎಚ್.ಆರ್ ಮಾನ್ಯೆಜರ ಪ್ರಕಾಶ ಅವಟೆ , ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ಮಾಜಿ ಜಿ.ಪಂ ಸದಸ್ಯ , ಟಿ.ಆರ್.ಕಾಗಲ್, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಪೌರಾಯುಕ್ತ ಬಸವರಾಜ ಹಿರೇಮಠ , ಡಾ. ಮುತ್ತಣ್ಣ ಕೊಪ್ಪದ, ಡಾ. ಆರ್‌.ಎಸ್. ಬೆನಚಿನಮರಡಿ , ಡಾ. ರವೀಂದ್ರ ಅಂಟಿನ್, ಸೇರಿದಂತೆ ಇತರರು ಇದ್ದರು.

Related posts: