RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ:ಪುರಸಭೆಯಿಂದ ಮಂಜೂರಾದ 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳಿಗೆ ಅಮರನಾಥ ರಿಂದ ಚಾಲನೆ

ಘಟಪ್ರಭಾ:ಪುರಸಭೆಯಿಂದ ಮಂಜೂರಾದ 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳಿಗೆ ಅಮರನಾಥ ರಿಂದ ಚಾಲನೆ 

ಪುರಸಭೆಯಿಂದ ಮಂಜೂರಾದ 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳಿಗೆ ಅಮರನಾಥ ರಿಂದ ಚಾಲನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 28 :

 
ಘಟಪ್ರಭಾ ಪುರಸಭೆಯಿಂದ ಸುಮಾರು 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳನ್ನು ಸೋಮವಾರದಂದು ಕೆಎಂಎಫ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸ್ಥಳೀಯ ಮಧುಕರ ದೇಶಪಾಂಡೆ ಇನಾಮದಾರ ಪ್ರೌಢ ಶಾಲೆಯ ಆವರಣದಲ್ಲಿ ಜರುಗಿದ ಸಮಾರಭದಲ್ಲಿ ಟಾಟಾ ಜೆಸಿಬಿ, ನೀರಿನ ಟ್ಯಾಂಕ್, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಜೆಟ್ಟಿಂಗ್ ಹಾಗೂ ಸಿಕ್ಕಿಂಗ್ ಮಶೀನ ಸೇರಿದಂತೆ ನಾಲ್ಕು ವಾಹನಗಳನ್ನು ಚಾಲನೆ ನೀಡಲಾಯಿತು. ಇದೇ ಸಮಯದಲ್ಲಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯವು ಗಣ್ಯರಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ, ಪ.ಪಂ ಉಪಾಧ್ಯಕ್ಷ ಈರಣ್ಣ ಕಲಕುಟಗಿ, ಸದಸ್ಯರಾದ ಗಂಗಾಧರ ಬಡಕುಂದ್ರಿ, ಸಲೀಮ ಕಬ್ಬೂರ, ಪ್ರವೀಣ ಮಟಗಾರ, ಮಲ್ಲು ಕೋಳಿ,ನಾಗರಾಜ ಚಚಡಿ, ಹಿರಿಯರಾದ ಡಿ.ಎಂ.ದಳವಾಯಿ, ಮಡಿವಾಳಪ್ಪ ಮುಚಳಂಬಿ, ರಮೇಶ ತುಕ್ಕಾನಟ್ಟಿ, ಈಶ್ವರ ಮಟಗಾರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಜಿ.ಎಸ್.ರಜಪೂತ, ಸುರೇಶ ಪೂಜಾರಿ, ಕಲ್ಲಪ್ಪಾ ಕಡದವರ, ಕುಮಾರ ಹುಕ್ಕೇರಿ, ಅಲ್ತಾಪ ಉಸ್ತಾದ, ಜುವೇದ ಡಾಂಗೆ, ಪ್ರತಾಪ ಬೇವಿನಗಿಡದ, ವೀರಭದ್ರ ಗಂಡವ್ವಗೋಳ, ಲಕ್ಷ್ಮಣ ಮೇತ್ರಿ, ರಾಜು ದೊಡಮನಿ, ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ಅಭಿಯಂತರರಾದ ಎಂ.ಎಸ್.ತೇಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಅನೇಕರು ಇದ್ದರು.

Related posts: