ಗೋಕಾಕ:ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು : ಪ್ರಾಚಾರ್ಯ ಮಹೇಶ ಕಂಬಾರ
ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು : ಪ್ರಾಚಾರ್ಯ ಮಹೇಶ ಕಂಬಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 3 :
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಕೊರೋನಾ ಲಸಿಕೆ ಅಭಿಯಾನಕ್ಕೆ ಶನಿವಾರದಂದು ಕಾಲೇಜಿನ ಆವರಣದಲ್ಲಿ ಪ್ರಾಚಾರ್ಯ ಮಹೇಶ ಕಂಬಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಕೊರೋನಾ ಲಸಿಕೆಯನ್ನು ಪಡೆದುಕೊಂಡು ಸರಕಾರದ ಹೊರಡಿಸಿರುವ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಭಾರತವನ್ನು ಕೊರೋನಾ ಮುಕ್ತ ರಾಷ್ಟ್ರ ಮಾಡುಲು ಶ್ರಮಿಸಬೇಕಾಗಿದೆ. ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾಲೇಜಿನಲ್ಲಿ ಓದುತ್ತಿರುವ 1378 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಅಭಿಯಾನ ಜುಲೈ 7 ರವರೆಗೆ ನಡೆಯಲಿದ್ದು ಕಾಲೇಜಿನಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳು ಆದಷ್ಟು ಬೇಗ ಜುಲೈ 7 ರ ಒಳಗೆ ಕಾಲೇಜಿಗೆ ಬಂದು ಲಸಿ ಪಡೆದುಕೋಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಪಿ.ಎ ಲಕ್ಷೇಟ್ಟಿ ಡಾ. ಸುನಂದಾ ಮಾದರ, ವ್ಹಿ.ಐ ತಿಳಗಂಜಿ, ವಿಜಯ ಹುಣಚ್ಯಾಳಿ, ಚಿದಾನಂದ ಶಿಂಗೆ, ಸಿಬ್ಬಂದಿಗಳಾದ ಶರೀಫ ಮಾವುತ, ಬಸವರಾಜ ಸಾಸೈಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.