ಘಟಪ್ರಭಾ:ಸರ್ಕಾರಿ ಪದವಿ ಕಾಲೇಜು ಮಂಜೂರಾತಿಗಾಗಿ ಹೋರಾಟ : ಬಸವರಾಜ ಹುದ್ದಾರ
ಸರ್ಕಾರಿ ಪದವಿ ಕಾಲೇಜು ಮಂಜೂರಾತಿಗಾಗಿ ಹೋರಾಟ : ಬಸವರಾಜ ಹುದ್ದಾರ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 3 :
ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಬೇಕೆಂದು ಆಗ್ರಹಿಸಿ ಬರುವ ಅಗಸ್ಟ 15ರಂದು ಗಾಂದಿ ಚೌಕದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತರಾದ ಬಸವರಾಜ ಹುದ್ದಾರ ತಿಳಿಸಿದರು.
ಅವರು ಶನಿವಾರದಂದು ಸ್ಥಳಿಯ ದಾನಮ್ಮಾ ದೇವಸ್ಥಾನದ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 40 ವರ್ಷಗಳಿಂದ ಘಟಪ್ರಭಾಕ್ಕೆ ಸರ್ಕಾರಿ ಪದವಿ ಕಾಲೇಜಿನ ಮಂಜೂರಾತಿಗಾಗಿ ಹೋರಾಟ ನಡೆಸಿದ್ದರೂ ಈ ಭಾಗದ ಸಂಸದರು, ಶಾಸಕರು ಹಾಗೂ ಸಚಿವರಾಗಲಿ ಕಾಲೇಜು ಮಂಜೂರಮಾಡಿಲ್ಲ. ಕಾರಣ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾನು ಕಾಲೇಜು ಮಂಜೂರು ಮಾಡುವ ವರೆಗೆ ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದರು.
ಮಾದ್ಯದವರು ಕೇಳಿದ ಪ್ರಶ್ನಗೆ ಉತ್ತರಿಸಿದ್ತವರು ಈ ವಿಷಯದಲ್ಲಿ ಯಾವದೇ ರಾಜಿ ಇಲ್ಲ ಜುಲೈ ತಿಂಗಳ ಒಳಗೆ ಕಾಲೇಜ ದಾಖಲಾತಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ವಿವಿದ ರೂಪದಲ್ಲಿ ನಡೆಯುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸ್ಥಳೀಯ ಘಟಕದ ಬಿಜೆಪಿ ಅಧ್ಯಕ್ಷರಾದ ಬಸವರಾಜ ಹತ್ತರವಾಟ ಹಾಗೂ ಇನ್ನಿತರರು ಇದ್ದರು.