ಗೋಕಾಕ:ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಪುರುಷೊತ್ತಮಾನಂದಪುರಿ ಶ್ರೀಗಳ ಭೇಟಿ
ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಪುರುಷೊತ್ತಮಾನಂದಪುರಿ ಶ್ರೀಗಳ ಭೇಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 6 :
ನಗರದಲ್ಲಿ ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಉಪ್ಪಾರ ಸಮಾಜ ಭಾಂಧವರ ಮನೆಗಳಿಗೆ ಸೋಮವಾರದಂದು ಹೊಸದುರ್ಗ ಶ್ರೀ ಭಗೀರಥ ಪೀಠದ ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿಗಳು ಭೇಟಿಯಾಗಿ ಸಾಂತ್ವನ ಹೇಳಿದರು
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು ಕೊರೋನಾ ಮಹಾಮಾರಿಯಿಂದ ಉಪ್ಪಾರ ಸಮಾಜದ ಹಲವು ಮುಖಂಡರುಗಳು ನಮ್ಮನ್ನು ಬಿಟ್ಟು ಅಗಲಿದ್ದು, ತುಂಬಾ ದುಃಖ ಉಂಟುಮಾಡಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜಾತ್ರಾ ಕಮೀಟಿ ಸದಸ್ಯ ದಿ. ವಿಠ್ಠಲ ಹೆಜ್ಜೆಗಾರ ಅವರ ಮನೆಗೆ ಭೇಟಿ ನೀಡಿದ ಪುರುಷೊತ್ತಮಾನಂದ ಶ್ರೀಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಉಪ್ಪಾರ ಸಮಾಜದ ಮುಖಂಡರು ಹಾಗೂ ಜಿಪಂ ಮಾಜಿ ಸದಸ್ಯೆ ತೇಜಸ್ವಿನಿ ನಾಯಿಕವಾಡಿ, ಗೋಕಾಕ ತಾಲೂಕ ಉಪ್ಪಾರ ಸಮಾಜದ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ರಾಮಣ್ಣ ತೋಳಿ, ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಡಾ. ಲಕ್ಷ್ಮಣ ದಂಡಿನ ಅವರ ಮನೆಗಳಿಗೆ ಭೇಟಿ ನೀಡಿದ ಶ್ರೀಗಳು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಟಕಭಾಂವಿಯ ಶ್ರೀ ಅಭಿನವಧರೇಶ್ವರ ಸ್ವಾಮಿಜಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮಣ್ಣವರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಉಪ್ಪಾರ ಸಮಾಜದ ಮುಖಂಡರಾದ ಬಿ ಬಿ ಹಂದಿಗುಂದ, ಭೀಮಶಿ ಪಾಟೀಲ, ಎಸ್ ಎಮ್ ಹತ್ತಿಕಟಗಿ, ಎಲ್ ಎನ್ ಗೂದಿಗೊಪ್ಪ, ಭರಮಣ್ಣ ಉಪ್ಪಾರ, ಶಂಭುಲಿಂಗ ಮುಕ್ಕನ್ನವರ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಪರಶುರಾಮ ಖಾನಪ್ಪನವರ ಸೇರಿದಂತೆ ಇತರರು ಇದ್ದರು.