ಘಟಪ್ರಭಾ:1 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೆಎಂಎಫ್ ನಿರ್ದೇಶಕ ಅರಮನಾಥ ಜಾರಕಿಹೊಳಿ ಅವರಿಂದ ಗುದ್ದಲಿ ಪೂಜೆ
1 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೆಎಂಎಫ್ ನಿರ್ದೇಶಕ ಅರಮನಾಥ ಜಾರಕಿಹೊಳಿ ಅವರಿಂದ ಗುದ್ದಲಿ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 7 :
ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಬುಧವಾರ ದಂದು ಕೆಎಂಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ನೀರಾವರಿ ಇಲಾಖೆಯ ವತಿಯಿಂದ ಬಬಲಾದಿ ಮಠದ ಮುಖ್ಯ ರಸ್ತೆಯಿಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯವರೆಗೆ ಸುಮಾರು ಎಂಬತ್ತು ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮತ್ತು ವಡ್ಡರ ಗಲ್ಲಿಯ ಮುಖ್ಯ ರಸ್ತೆಗೆ ಜಿಎಲ್ ಬಿಸಿ ಇಲಾಖೆಯ ವತಿಯಿಂದ ಇಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿ ಮಾಡಲಾಗುತ್ತದೆ.ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇನ್ನೂ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ವಿವಿಧ ಇಲಾಖೆಗಳ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರ ಕಾರ್ಯಾಲಯದ ಆಪ್ತ ಸಹಾಯಕ ರಾದ ಸುರೇಶ ಸನದಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಣುಕಾ ಈರಪ್ಪ ಪಾಟೀಲ ಉಪಾಧ್ಯಕ್ಷ ಭೀಮಪ್ಪ ಯಲ್ಲಪ್ಪ ಬಿರನಾಳಿ, ಮುಖಂಡರುಗಳಾದ ನಿಂಗಪ್ಪ ಬಂಬಲಾಡಿ. ಗುರು ಕಡೇಲಿ, ರಾಮಯ್ಯ ಆಲೋಶಿ, ರಕ್ಷಪ್ಪಾ ಹೊನ್ನಪ್ಪಗೋಳ, ಶಂಕರ್ ನಿಲಗಾರ, ಅಡಿವೆಪ್ಪ ಬೆಳಗಲಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಇಲಾಖೆಯ ಅಧಿಕಾರಿಗಳು. ಗುತ್ತಿಗೆದಾರರು ಉಪಸ್ಥಿತರಿದ್ದರು.