ಗೋಕಾಕ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪತ್ರ ಕಳುಹಿಸಿ ಆತ್ಮಸ್ಥೈರ್ಯ ಹೆಚ್ಚಿಸಿದ ಶಾಸಕ ರಮೇಶ ಜಾರಕಿಹೊಳಿ ವಿನೂತನ ಕಾರ್ಯಕ್ಕೆ ಪಾಲಕರು ಫೀಧಾ
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪತ್ರ ಕಳುಹಿಸಿ ಆತ್ಮಸ್ಥೈರ್ಯ ಹೆಚ್ಚಿಸಿದ ಶಾಸಕ ರಮೇಶ ಜಾರಕಿಹೊಳಿ ವಿನೂತನ ಕಾರ್ಯಕ್ಕೆ ಪಾಲಕರು ಫೀಧಾ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :
ಕೊರೋನಾ, ಲಾಕಡೌನ ಹಾಗೂ ವಯಕ್ತಿಕ ಕಾರ್ಯಗಳ ಒತ್ತಡಗಳ ಮಧ್ಯೆಯೂ ಗೋಕಾಕ ಶಾಸಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಭ್ಯಾಸದ ಬಗ್ಗೆ ಕಾಳಜಿ ವಹಿಸಿ ಈ ಬಾರಿ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರಿಗೆಲ್ಲ ( ಇನ್ ಲ್ಯಾಂಡ್) ಅಂತರದೇಸಿ ಪತ್ರ ಬರೆಯುವ ಮೂಲಕ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ.
ಈಗಾಗಲೇ ತಮ್ಮ ವಲಯದ ಸುಮಾರು 5 ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿಯವರ ಈ ಪತ್ರ ಅಭಿಯಾನ ವಿದ್ಯಾರ್ಥಿ, ಶಿಕ್ಷಕ ಹಾಗೂ ಪಾಲಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಜುಲೈ 19 ಮತ್ತು 22 ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದ್ದು , ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗುವ ದೃಷ್ಟಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಗೋಕಾಕ ವಲಯದ 5 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪತ್ರ ಕಳುಹಿಸಿ ಓದಿನ ಕಡೆ ಗಮನ ಹರಿಸುವಂತೆ ಪ್ರೇರೆಪಿಸಿದ್ದಾರೆ.
ಕೋವಿಡ 1 ಮತ್ತು 2ನೇ ಅಲೆಯಿಂದ ಮನೆಯಲ್ಲಿ ಕುಳಿತು ಆನಲೈನ್ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಹಾಗೂ ಆನಲೈನ್ ಪಾಠ ಮಾಡುತ್ತಿರುವ ಶಿಕ್ಷಕರು ಖಿನ್ನತೆಗೆ ಒಳಗಾಗಬಾರದು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ವಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ “ಪತ್ರದಿಂದ ಬಾಂಧವ್ಯ ಬೆಸುಗೆ” ಎಂಬ ಕಲ್ಪನೆಯೊಂದಿಗೆ ಈ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ವ್ಯಾಟ್ಸಫ್ , ವಿಡಿಯೋ ಕಾಲ , ಎಸ್.ಎಂ ಎಸ್ ದಂತಹ ಆಧುನಿಕ ಕಾಲದಲ್ಲಿಯೂ ಸಹ ಶಾಸಕ ರಮೇಶ ಜಾರಕಿಹೊಳಿ ಅವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪತ್ರ ಕಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚಿಗುರು ಮೂಡಿಸಿದ್ದಾರೆ. ಶಾಸಕರು ಬರೆದ ಪತ್ರ ಓದಿದ ವಿದ್ಯಾರ್ಥಿಗಳು ರೋಮಾಂಚನಗೊಂಡು ಓದಿನ ಕಡೆ ಗಮನ ಹರಿಸಿ ತಮ್ಮ ಓದಿನ ವೇಳೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಪಾಲಕರೂ ಸಹ ಅಷ್ಟೇ ಪ್ರೀತಿಯಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಒಟ್ಟಾರೆಯಾಗಿ ಶಾಸಕರ ಈ ವಿನೂತನ ಪತ್ರ ಅಭಿಯಾನ ವಿದ್ಯಾರ್ಥಿಗಳಿಗೆ ಟಾನಿಕ್ ಆಗಿ ಪರಿಣಮಿಸಿದ್ದಂತೂ ನಿಜ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಕೊರೋನಾದಿಂದ ಭಯಭೀತರಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ ಎಂದು ಯೋಚಿಸುತ್ತಿರುವ ಸಮಯದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪತ್ರ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಹೆಚ್ಚಿಸಿದ್ದು, ವಿದ್ಯಾರ್ಥಿಗಳು ಶಾಸಕರ ಪತ್ರವನ್ನು ಮುಂದಿಟ್ಟುಕೊಂಡು ಓದುತ್ತಿರುವದು ತುಂಬಾ ಖುಷಿ ತಂದಿದೆ . ಶೈಕ್ಷಣಿಕವಾಗಿ ಸದಾ ನಮಗೆ ಮಾರ್ಗದರ್ಶನ ನೀಡುತ್ತಿರುವ ಶಾಸಕರ ಈ ಪತ್ರ ಅಭಿಯಾನ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಇರುವ ಭಯವನ್ನು ನಿವಾರಿಸಿದೆ ಎಂದರು.
ಪತ್ರ ಮುಟ್ಟಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಹ ಶಾಸಕ ರಮೇಶ ಜಾರಕಿಹೊಳಿ ಅವರ ಈ ವಿನೂತನ ಕಾರ್ಯವನ್ನು ಕೊಂಡಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು , ಶಾಸಕ ಶಿಕ್ಷಣ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ಪತ್ರದಲ್ಲಿ ಏನಿದೆ : ನಿಮಗೆಲ್ಲ ಪ್ರೀತಿಯ ಶುಭಾಶೀರ್ವಾದಗಳು ಎಂಬ ಪ್ರೀತಿಯ ಸಾಲುಗಳಿಂದ ಪ್ರಾರಂಭವಾಗುವ ಪತ್ರವು, ನನಗೆ ತುಂಬಾ ಸಂತೋಷವಾಗುತ್ತದೆ ನೀವೆಲ್ಲಾ ಈ ವರ್ಷ ತಮ್ಮ ಬದುಕಿನ ಪ್ರಮುಖ ಘಟ್ಟ ಎಸ್.ಎಸ್.ಎಲ್.ಸಿ ಓದುತ್ತಿದ್ದಿರಿ ಮನೆಯಲ್ಲಿ ಪಾಲಕರು ಮತ್ತು ಗುರುಗಳು ಬಹಳಷ್ಟು ಕನಸುಗಳನ್ನು ಹೊತ್ತು ನಿಮ್ಮ ಮೇಲೆ ಭರವಸೆ ಇಟ್ಟು ನಿಮ್ಮ ಭವಿಷ್ಯವನ್ನು ಉತ್ಸುಕತೆಯಿಂದ ನೋಡಲು ಕಾತುರರಾಗಿದ್ದಾರೆ. ಅವರಿಗೆ ಖುಷಿ ಆಗುವ ರೀತಿಯಲ್ಲಿ ತಾವು ಓದಬೇಕು ಒಂದು ದಿನ ಸಮಾಜದಲ್ಲಿ ನಿಮಗೆ ದೊಡ್ಡ ಗೌರವ ಸಿಗಬೇಕು. ಆ ಹಾದಿಯಲ್ಲಿ ನೀವು ಸಾಗಿರಿ ಎಂಬ ಪ್ರೋತ್ಸಾಹ ದಾಯಕ ಸಾಲುಗಳಿಂದ ಕೂಡಿರುವ ಪತ್ರವು ಮನೆಯಲ್ಲಿ ಎಲ್ಲರಿಗೂ ನಮಸ್ಕಾರ ತಿಳಿಸಿ ಆಲ್ ದಿ ಬೇಸ್ಟ , ಗಾಡ್ ಬ್ಲೆಸ್ ಯು ಎಂಬ ಭಾವನಾತ್ಮಕ ಮಾತುಗಳಿಂದ ಪತ್ರವು ವಿದ್ಯಾರ್ಥಿ, ಪಾಲಕ ಹಾಗೂ ಶಿಕ್ಷರ ಮನಸ್ಸು ಗೆಲ್ಲುತ್ತದೆ.
” ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಭಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಶಾಸಕ ರಮೇಶ ಜಾರಕಿಹೊಳಿ ಅವರು ನಮಗೆ ಪತ್ರ ಬರೆದು ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಇವರ ಬರೆದ ಪತ್ರ ಓದಿ ಮೈ ರೋಮಾಂಚನ ಗೊಂಡಿದದ್ದು, ಹೆದರಿಕೆ ಇಲ್ಲದೆ ಪರೀಕ್ಷೆ ಎದುರಿಸಲು ಶಕ್ತಿ ಬಂದತಾಗಿದೆ”.
– ಕುಮಾರಿ ಮೇಘಾ ಉಪ್ಪಾರ. ಆದರ್ಶ ವಿದ್ಯಾಲಯ ಖನಗಾಂವ . ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ.
” ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಶಾಸಕ ರಮೇಶ ಜಾರಕಿಹೊಳಿ ಅವರು ಪತ್ರ ಬರೆದು ಹುರಿದುಂಬಿಸಿರುವುದು ಶ್ಲಾಘನೀಯ. ಕೆಲಸದ ಒತ್ತಡದಲ್ಲಿರುವ ನಮಗೆ,ಶಾಸಕರ ಈ ಪತ್ರ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಮಾಡಿದೆ”.
– ಬಾಳಪ್ಪ ಆಡಿವಿನ್ನವರ .ಎಸ್.ಎಸ್.ಎಲ್.ಸಿ.
ವಿದ್ಯಾರ್ಥಿಯ ಪಾಲಕ