RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ರೈತರು ಆರ್ಥಿಕ ಸ್ವಾವಲಂಬಿಗಳಾಗಲು ಸರಕಾರದ ಯೋಜನೆಗಳು ಪೂರಕವಾಗಿವೆ -ಸಂಸದ ಈರಣ್ಣ ಕಡಾಡಿ

ಮೂಡಲಗಿ:ರೈತರು ಆರ್ಥಿಕ ಸ್ವಾವಲಂಬಿಗಳಾಗಲು ಸರಕಾರದ ಯೋಜನೆಗಳು ಪೂರಕವಾಗಿವೆ -ಸಂಸದ ಈರಣ್ಣ ಕಡಾಡಿ 

ರೈತರು ಆರ್ಥಿಕ ಸ್ವಾವಲಂಬಿಗಳಾಗಲು ಸರಕಾರದ ಯೋಜನೆಗಳು ಪೂರಕವಾಗಿವೆ -ಸಂಸದ ಈರಣ್ಣ ಕಡಾಡಿ

 
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜು 19 :

 

ಅನ್ನದಾತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಸಿರಿ, ಪಿ.ಎಂ ಕಿಸಾನ್, ಆತ್ಮ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳನ್ನು ರೈತರು ಸದುಪಯೋಗ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಮೂಡಲಗಿ ತಾಲೂಕಾ ಕೃಷಿ ಇಲಾಖೆ ಆಯೋಜಿಸಿದ 2021-22ನೇ ಸಾಲಿನ ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೃಷಿ ಇಲಾಖೆ ಹಮ್ಮಿಕೊಂಡಿರುವ “ಕೃಷಿ ಇಲಾಖೆ ನಡೆ ರೈತರ ಮನೆ ಬಾಗಿಲ ಕಡೆ” ಎಂಬ ವಿನೂತನ ಕಾರ್ಯಕ್ರಮದಿಂದ ರೈತರಿಗೆ ಸರ್ಕಾರದ ಕೃಷಿ ಯೋಜನೆಗಳ ಸಹಾಯ ಸೌಲಭ್ಯ ಹಾಗೂ ತಂತ್ರಜ್ಞಾನಗಳ ಮಾಹಿತಿಯನ್ನು ಪಡೆದುಕೊಂಡು ಕೃಷಿ ಚಟುವಟಕೆಗಳಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾಗೂ ಬೆಳೆಗಳ ಸಮತೋಲನ ಕಾಯ್ದುಕೊಂಡು ಕೃಷಿಯಿಂದ ಅಧಿಕ ಲಾಭ ಪಡೆಯಲು ನೆರವಾಗಲಿದೆ ಎಂದರು.
ದೇಶದ ಎಲ್ಲಾ ರೈತರು 2021-22ನೇ ಸಾಲಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿದ್ದು, ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯೋಜನೆ ಅನ್ವಯ ರೈತರು ತಮ್ಮ ಜಮೀನುಗಳ ಸರ್ವೇ ನಂಬರ್, ಹಿಸ್ಸಾ ನಂಬರ್‌ವಾರು ನೀವು ಬೆಳೆದ ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಇನ್ನಿತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ನೀವೆ ಬೆಳೆ ಸಮೀಕ್ಷೆಯನ್ನು ಕೈಗೊಂಡು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ಮೂಲಕ ಸರ್ಕಾರದ ಬಹು ನೀರಿಕ್ಷಿತ ಯೋಜನೆಯನ್ನು ಯಶ್ವಸಿಗೊಳಿಸಲು ರೈತ ಬಾಂಧವರಲ್ಲಿ ವಿನಂತಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ಎಂ. ಎಂ. ನದಾಫ್, ಕೃಷಿ ಅಧಿಕಾರಿ ಶಂಕರ ಹಳದಮನಿ, ಪರಸಪ್ಪ ಹುಲಗಬಾಳ, ಸಹಾಯಕ ಕೃಷಿ ಅಧಿಕಾರಿ ಬಿ.ಎಸ್. ಕೇಳದೂರ ಬೆಳಗಾವಿ ಗ್ರಾಮೀಣ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಅರಭಾವಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಶ್ರೀಶೈಲ ತುಪ್ಪದ, ಶಂಕರ ಗೋರೋಶಿ, ಕಾಡೇಶ ಗೋರೋಶಿ, ತುಕಾರಾಮ ಪಾಲ್ಕಿ, ಕೃಷ್ಣಾ ಮುಂಡಿಗನಾಳ, ಶಿವಲಿಂಗ ಕುಂಬಾರ, ಶಂಕರ ಖಾನಗೌಡ್ರ, ಪರಪ್ಪ ಕಡಾಡಿ, ಮಹಾಂತೇಶ ಕುಡಚಿ, ಸುರೇಶ ಮಠಪತಿ, ದುಂಡಪ್ಪ ನಿಂಗಣ್ಣವರ, ಶ್ರೀಕಾಂತ ಕೌಜಲಗಿ, ಅಡಿವೆಪ್ಪ ಕುರಬೇಟ, ಭೀಮಶಿ ಬಂಗಾರಿ ಸೇರಿದಂತೆ ಅರಭಾಂವಿ ಮಂಡಲ ರೈತ ಮೋರ್ಚಾ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Related posts: