RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಿ : ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ

ಗೋಕಾಕ:ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಿ : ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ 

ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಿ : ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :

 
ಪರಿಸರ ವಿಲ್ಲದೆ ಮಾನವನ ಬದುಕು ಅಸಾಧ್ಯಾವಾಗಿದ್ದು, ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗುವಂತೆ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಹೇಳಿದರು.

ಶುಕ್ರವಾರದಂದು ನಗರದ ಸೋಶಿಯಲ್ ಟೆನಿಸ್ ಕ್ಲಬ್ ಆವರಣದಲ್ಲಿ ರೋಟರಿ ಸಂಸ್ಥೆಯವರು ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾನವ ಬದುಕಲು ಅತೀ ಆವಶ್ಯವಾದ ಆಮ್ಲಜನಕ ಗಿಡ ಮರಗಳಿಂದಲೆ ದೊರೆಯುತ್ತದೆ. ಕೊರೋನಾ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದ್ದು, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಗೂ ಮುಂದಾಗುವಂತೆ ಕರೆ ನೀಡಿದ ಅವರು ಶೀಘ್ರದಲ್ಲೇ ಸಮೀಪದ ದೂಪದಾಳ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಪಕ್ಷಿ ಧಾಮದ ವೀಕ್ಷಣೆಗೆ ಜನತೆಗೆ ಅನುಕೂಲ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ರಾಜು ವರದಾಯಿ, ಕಾರ್ಯದರ್ಶಿ ದಿಲೀಪ್ ಮೆಳವಂಕಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಈಟಿ, ಮಹಾಂತೇಶ ತಾಂವಶಿ, ಡಾ.ಉದಯ ಆಜರೆ, ಮಲ್ಲಿಕಾರ್ಜುನ ಕಲ್ಲೋಳಿ, ವಿಶ್ವನಾಥ್ ಕಡಕೋಳ, ಸೋಮಶೇಖರ್ ಮಗದುಮ್ಮ, ಬಸನಗೌಡ ದೂಳಾಯಿ, ಶಿವಾನಂದ ಪಂಚನ್ನವರ, ಸೋಶಿಯಲ್ ಕ್ಲಬನ ವಿವೇಕ ಖೋತ , ಡಾ‌.ಜಿ.ಆರ್.ಸೂರ್ಯವಂಶಿ, ಬಾಬು ಶೆಟ್ಟಿ, ಉಪ ವಲಯ ಅರಣ್ಯ ಅಧಿಕಾರಿ ಹನುಮಂತ ಇಂಗಳಿ ಸೇರಿದಂತೆ ಅನೇಕರು ಇದ್ದರು.

Related posts: