ಗೋಕಾಕ:ಇನರವ್ಹೀಲ್ ಸಂಸ್ಥೆ ವಿಶ್ವದ ಎರಡನೇ ದೊಡ್ಡ ಮಹಿಳಾ ಸಂಸ್ಥೆಯಾಗಿದೆ : ರತ್ನಾ ಬೆಹರೆ
ಇನರವ್ಹೀಲ್ ಸಂಸ್ಥೆ ವಿಶ್ವದ ಎರಡನೇ ದೊಡ್ಡ ಮಹಿಳಾ ಸಂಸ್ಥೆಯಾಗಿದೆ : ರತ್ನಾ ಬೆಹರೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :
ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಇನರವ್ಹೀಲ್ ಸಂಸ್ಥೆ ವಿಶ್ವದ ಎರಡನೇ ದೊಡ್ಡ ಮಹಿಳಾ ಸಂಸ್ಥೆಯಾಗಿದೆ ಎಂದು ಇನರವ್ಹೀಲ್ ಸಂಸ್ಥೆಯ ಜಿಲ್ಲಾ ಚೇರಮನ್ ರತ್ನಾ ಬೆಹರೆ ಹೇಳಿದರು.
ಶುಕ್ರವಾರದಂದು ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಇಲ್ಲಿನ ಇನರವ್ಹೀಲ್ ಸಂಸ್ಥೆಯವರು ಆಯೋಜಿಸಿದ್ದ ಕೊರೋನಾ ವಾರಿಯರ್ಸ್ ರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಂಸ್ಥೆಯು ಪರಸ್ಪರರಲ್ಲಿ ಮಾನವಿಯ ಭಾಂಧವ್ಯವನ್ನು ವೃದ್ದಿಸುತ್ತಾ ಸಮಾಜಸೇವೆ ಕಾರ್ಯಗಳಿಂದ ಜನರ ಸಮಸ್ಯೆಗಳಿಗೆ ಸ್ವಂದಿಸುತ್ತಿದೆ. ಕೊರೋನಾ ವೈರಸ್ ನಿಂದ ಸಂಕಷ್ಟಕೋಳಗಾದ ಜನರಿಗೆ ಸಹಾಯ ಸಹಕಾರ ನೀಡಿ ವೈರಸ್ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಾ ಕಾರ್ಯವನ್ನು ಮಾಡುತ್ತಿದೆ. ನಾವೆಲ್ಲಾ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೋಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸೋಣಾ ಎಂದರು.
ಈ ಸಂದರ್ಭದಲ್ಲಿ ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವರದಾಯಿ, ಕಾರ್ಯದರ್ಶಿ ವಿದ್ಯಾ ಗುಲ್ , ಪದಾಧಿಕಾರಿಗಳಾದ ಆರತಿ ನಾಡಗೌಡ, ರೂಪಾ ಮುನವಳ್ಳಿ, ಗಿರೀಜಾ ಮುನೋಳ್ಳಿಮಠ, ಸೀತಾ ಬೆಳಗಾವಿ, ವಿದ್ಯಾ ಮಗದುಮ್ಮ , ಮಹೇಶ್ವರಿ ತಾಂವಶಿ, ವಂದನಾ ವರದಾಯಿ, ಅನುಪಮಾ ಗಚ್ಚಿ ಇದ್ದರು.