RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆ : ಮಯೂರ ಆಂಗ್ಲ ಮಾಧ್ಯಮ ಶಾಲೆಯ 100ಕ್ಕೆ 100 ಫಲಿತಾಂಶ

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆ : ಮಯೂರ ಆಂಗ್ಲ ಮಾಧ್ಯಮ ಶಾಲೆಯ 100ಕ್ಕೆ 100 ಫಲಿತಾಂಶ 

ಎಸ್.ಎಸ್.ಎಲ್.ಸಿ ಪರೀಕ್ಷೆ : ಮಯೂರ ಆಂಗ್ಲ ಮಾಧ್ಯಮ ಶಾಲೆಯ 100ಕ್ಕೆ 100 ಫಲಿತಾಂಶ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :

ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100ಕ್ಕೆ 100 ಫಲಿತಾಂಶ ಪಡೆದು 93.98 ಗುಣಾಂಕದೊಂದಿಗೆ ಎ ಗ್ರೇಡ್ ಪಡೆದಿದೆ ಎಂದು ಮುಖ್ಯೋಪಾಧ್ಯಾಯನಿ ಶ್ರೀಮತಿ ಸಿ.ಬಿ.ಪಾಗದ ತಿಳಿಸಿದ್ದಾರೆ.

ಪರೀಕ್ಷೆ ಬರೆದ 83  ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು  ಡಿಸ್ಟಿಂಕ್ಷನ್ , 40 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 11 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಮತ್ತು 19 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನೀ ತಜೀನ ದಫೇದಾರ (617) 98.72% ಪ್ರಥಮ, ರಕ್ಷಿತಾ ಮಿರ್ಚಿ ( 607) 97.12%, ತೈರೀನ ದೇಸಾಯಿ ( 607) 97.12% ದ್ವಿತೀಯ ಸ್ಥಾನ , ಸೃಷ್ಠಿ ಕಪ್ಪಲಗುದ್ದಿ ( 596) 95.36% ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಚೇರಮನ ಲಖನ್ ಜಾರಕಿಹೊಳಿ , ಆಡಳಿತ ಮಂಡಳಿಯ ನಿರ್ದೇಶಕ , ಶಿಕ್ಷಕರು  ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

Related posts: