ಗೋಕಾಕ:ಮರೆಯಲಾಗದ ಮಾಣಿಕ್ಯ ನಮ್ಮ ಶಿವು
ಮರೆಯಲಾಗದ ಮಾಣಿಕ್ಯ ನಮ್ಮ ಶಿವು
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಅ 13 :
2004 ರಿಂದ ನಮ್ಮೊಂದಿಗೆ ನಿಕಟ ಸಂರ್ಪಕ ಹೊಂದಿ ಬಾಯಿ ತುಂಬಾ ಬೈಯಾ ಎಂದು ಕರೆಯುತ್ತಿದ್ದ ಆತ್ಮೀಯ ( ನೋ ಪೇಮೆಂಟ್ ಒನಲಿ ಮೊಮೆಂಟ್) ಗೆಳೆಯ ಶಿವಾನಂದ ಪೂಜೇರಿ ಭೀಕರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿನ್ನೆ ವರೆಗೆ ನಮ್ಮೊಂದಿಗೆ ಇದ್ದ ಜೀವ ಇಂದು ನಮ್ಮನ್ನು ಅಗಲಿ ಇಹಲೋಕ ಸೇರಿದ್ದೆ ಎಂಬುವುದು ನಂಬಲು ಸಾಧ್ಯವಾಗುತ್ತಿಲ್ಲ.
ಒಬ್ಬ ಒಳ್ಳೆಯ ಗೆಳೆಯನಾಗಿ, ಗಾಯನ , ಹಾಸ್ಯ ಹಾಗೂ ನಿರೂಪಕನಾಗಿ ನಮ್ಮ ಭಾಗದಲ್ಲಿ optionlshivu ಎಂದೇ ಪ್ರಸಿದ್ಧಯಾಗಿದ್ದ ಶಿವು ಪೂಜೇರಿ, ನನ್ನ ಮತ್ತು ಗೆಳೆಯ ಅಬ್ಬಾಸ ದೇಸಾಯಿ ಯ ಅಚ್ಚುಮೆಚ್ಚಿನ ಕಲಾವಿದ ನಾವು ಸಂಘಟಿಸುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗೆಳೆಯ ಶಿವುದೆ ಕಾರುಬಾರು.ಬೈಯಾ ಹಂಗ ಮಾಡುನು, ಬೈಯಾ ಹಿಂಗ ಮಾಡುನು , ಅವರನ್ ಕರಕೊಂದ ಬರತೈನ್ , ಇವರನ್ ಕರಕೊಂದ ಬರತೈನ್ ಕಾರ್ಯಕ್ರಮ ಅಗಧಿ ಬೇಸ್ಟ ಮಾಡೋನ ಎಂದು ಎಲ್ಲಾ ತಮ್ಮ ಬಳಗದವರನ್ನು ಪೋನ ಮಾಡಿ ಅಬ್ಬಾಸ ಬೈಯ ಮತ್ತು ಸಾದಿಕ ಬೈಯ ಒಂದ ಕಾರ್ಯಕ್ರಮ ಮಾಡಾಕತಾರ ಎಲ್ಲರೂ ಸರಳ ಬರಬೇಕ್ ಕಾರ್ಯಕ್ರಮ ಸೆಕ್ಸೆಸ್ ಮಾಡಬೇಕ ಆದರ ಒಂದ ಖಂಡಿಷನ ನೋ ಪೇಮೆಂಟ್ ಒನಲಿ ಮೋಮೆಂಟ ಎಂದು ಎಲ್ಲ ಕಲಾವಿದರನ್ನು ಕೂಡಿಸಿ ಅದ್ಭುತ ಕಾರ್ಯಕ್ರಮ ನೀಡುವ ನಮ್ಮ ಆತ್ಮೀಯ ಗೆಳೆಯ ಶಿವು ಬಾರದ ಲೋಕಕ್ಕೆ ತೆರಳಿದ್ದಾನೆ ಎಂದರೆ ಹೇಗೆ ನಂಬವುದು.
ಗೆಳೆಯ ಶಿವು ನಮ್ಮೊಂದಿಗೆ ಮಾತನಾಡುತ್ತಿದ್ದ ಮಾತುಗಳು ಕಿವಿಯಲ್ಲಿ ಹರಿದಾಟುತ್ತಿವೆ. ಶಿವು ಪದೆ ಪದೆ ಹೇಳುತ್ತಿದ ಒಂದು ಮಾತು ಬೈಯಾ ನನ್ನ ಜೀವನದಲ್ಲಿ ದೇವರನ್ ಬಿಟ್ಟರ ಒಂದ ಸತೀಶ ಸಾವಕಾರ, ರಿಯಾಜ ಬೈಯಾ , ಅಬ್ಬಾಸ ಬೈಯಾ ಮತ್ತು ಸಾದಿಕ ಬೈಯಾ ನಿವ 4 ಮಂದಿ ಏನ ಹೇಳದರ ಸಾಕ ನಾ ಏನ ಬೇಕಾದ ಮಾಡಾಕ ರೆಡಿ ಎಂದು ಹೇಳುತ್ತಿದ್ದ ಗೆಳೆಯ ಶಿವು ನುಡಿದಂತೆ ಮಾಡಿ ತೊರಿಸುತ್ತಿದ್ದ ನಾನಾಗಲಿ , ಅಬ್ಬಾಸ ಆಗಲಿ , ರಿಯಾಜ ಬೈಯಾ ಆಗಲಿ ಹೇಳಿದ ಯಾವುದೇ ಮಾತು ,ಕೆಲಸ ಗೆಳೆಯ ಶಿವು ತದೆಕ ಚಿತ್ತದಿಂದ ಮಾಡುತ್ತಿದ್ದ ಅಂತಹ ಆತ್ಮೀಯ ಗೆಳೆಯ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾನೆ. ದೇವರು ಅವನ ಅಗಲಿಕೆಯ ನೋವು ಭರಿಸುವ ಶಕ್ತಿ ಅವನ ಕುಟುಂಬ ಸದಸ್ಯರಿಗೆ ಹಾಗೂ ಅವನ ಅಫಾರ ಗೆಳೆಯರ ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ.