RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಬೆಳಗಾಂ ಶುಗರ್ಸ ಪ್ರೈ ಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನ ಆಚರಣೆ

ಗೋಕಾಕ:ಬೆಳಗಾಂ ಶುಗರ್ಸ ಪ್ರೈ ಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನ ಆಚರಣೆ 

ಬೆಳಗಾಂ ಶುಗರ್ಸ ಪ್ರೈ ಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನ ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :

 

ಕೆಪಿಸಿಸಿ ಕಾರ್ಯಾದ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಒಡೆತನದ ಬೆಳಗಾಂ ಶುಗರ್ಸ ಪ್ರೈ ಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ಕಾರ್ಯಕ್ರಮವನ್ನು 2020-21ನೇ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಂದಾಯ ಮಾಡಿದ ಪ್ರಗತಿಪರ ರೈತರಾದ ಶಂಕರಗೌಡಾ ಪಾಟೀಲ ಹಾಗೂ ಬಸಪ್ಪಾ ಹಮ್ಮಿನಿ ಅವರಿಂದ ನೆರವೆರಿಸಲಾಯಿತು.
ಶಂಕರಗೌಡಾ ಪಾಟೀಲ ದ್ವಜಾರೋಹಣ ನೆರವೇರಿsಸಿ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮಹಾತ್ಮಾ ಗಾಂದೀಜಿ ಮೊದಲಿಗರಾಗಿ, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ನಂತರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷಗಳು ಗತಿಸಿವೆ ಎಂದು ಹೇಳಿದರು.
ಈ ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷರಾದ ಸತೀಶ ಜಾರಕಿಹೊಳಿಯವರು ಹುದಲಿ ಗ್ರಾಮದಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿರುವುದರಿಂದ ಈ ಬಾಗದ ರೈತರಿಗೆ ಅನುಕೂಲ ಮಾಡಿಕೊಟ್ಟಿರುತ್ತಾರೆ ಹಾಗೂ ಸಂಸ್ಥೆಯ ಚೇರಮನರಾದ ಪ್ರದೀಪಕುಮಾರ ಇಂಡಿಯವರ ಮಾರ್ಗದರ್ಶನದಲ್ಲಿ ರೈತರಿಗೆ ಸಾಕಷ್ಟು ಸೌಲಬ್ಯಗಳನ್ನು ಒದಗಿಸುವ ಮೂಲಕ ರೈತರ ಅಬಿವೃದ್ದಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಲ್.ಆರ್.ಕಾರಗಿ ವಹಿಸಿದ್ದರು,
ಈ ಸಂದರ್ಭದಲ್ಲಿ ಕಾರ್ಖಾನೆಯ ತಾತ್ರಿಂಕ ಉಪಾದ್ಯಕ್ಷ ಎ.ಎಸ್.ರಾಣಾ, ಹಾಗೂ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರುಗಳು, ಕಾರ್ಮಿಕರು, ಸಿಬ್ಬಂದಿಯರು ಇದ್ದರು.

Related posts: