RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ : ಕವಿ ಅಲ್ಲಾಗಿರಿರಾಜ ಅಭಿಮತ

ಗೋಕಾಕ:ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ : ಕವಿ ಅಲ್ಲಾಗಿರಿರಾಜ ಅಭಿಮತ 

ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ : ಕವಿ ಅಲ್ಲಾಗಿರಿರಾಜ ಅಭಿಮತ

 

  ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ  ಅ 19 :

 

 

ಹೆಂಡತಿ ನಮ್ಮ ಕಾವ್ಯಕ್ಕೆ ಸ್ಪೂರ್ತಿಯಾಗಬೇಕು, ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ ಎಂದು ಕೊಪ್ಪಳದ ಘಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿ ಹೇಳಿದರು.

ಗುರುವಾರದಂದು ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಗೋಕಾಕ ಗೆಳೆಯರ ಬಳಗ ಹಮ್ಮಿಕೊಂಡ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ ಅವರ ಹರದಾರಿ ಮಾತು ಮತ್ತು ಮಕ್ಕಳ ಆಟಗಳು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಓದುಗರನ್ನು ಸೃಷ್ಟಿ ಮಾಡಲಾರದ ಕಥೆ, ಕವನ ಬರೆಯಬಾರದು. ಓದುಗರನ್ನು ಸೃಷ್ಟಿ ಮಾಡದೆ ಪುಸ್ತಕ ಬರೆಯುವುದು ಅಪರಾಧ. ಸಾಹಿತಿಗಳು ಸಹ ಸಮಾಜವನ್ನು ಕಟ್ಟಲು ಮುಂದಾಗಬೇಕಾಗಿ ಪುಸ್ತಕವನ್ನು ಓದವು ಪರಿಸರ ನಿರ್ಮಿಸಬೇಕಾದ ಜವಾಬ್ದಾರಿ ಸಾಹಿತಿಗಳ ಮೇಲಿದೆ.

ಇಂದು ಮಕ್ಕಳನ್ನು ಸಾಹಿತಿಗಳನ್ನಾಗಿ ಮಾಡಲು ನಾವು ಹಿಂದೆಟ್ಟು ಹಾಕುತ್ತಿದ್ದೆವೆ. ವಿಶ್ವವಿದ್ಯಾಲಯಗಳಿಗೆ ರೈತರನ್ನು ಕುಲಪತಿಗಳನ್ನಾಗಿ ಮಾಡಲು ನಮ್ಮ ಸರಕಾರಗಳು ಮನಸ್ಸು ಮಾಡಬೇಕಾಗಿದೆ. ಅನ್ನ ಕೊಟ್ಟವರಿಗೆ ಅನ್ನ ಕೊಡುವ ಕಾರ್ಯ ಆಗಬೇಕಾಗಿದೆ. ರೈತ ಸೈನಿಕರು ಸೇರಿದಂತೆ ರಾಷ್ಟ್ರವನ್ನು ಬಲಿಷ್ಠ ಗೋಳಿಸುವವರ ಕುರಿತು ಕವಿತೆಗಳನ್ನು ನಾವು ಬರೆಯಬೇಕಾಗಿದೆ. ಯಾರ ಮನೆಯಲ್ಲಿ ಪುಸ್ತಕ ವಿಲ್ಲವೋ ಆ ಮನೆ ಸ್ಮಶಾನಕ್ಕೆ ಸಮಾನ , ಗೊಂಬೆಗಳನ್ನು ಮತಾಡುವದಿಲ್ಲ ಪುಸಕಗಳು ಮಾತಾಡುತ್ತವೆ. ಆ ನಿಟ್ಟಿನಲ್ಲಿ ಮನೆಯಲ್ಲಿ ಪುಸ್ತಕಗಳನ್ನು ಶೇಖರಿಸಿ ಅವುಗಳನ್ನು ಓದುವ ಕಾರ್ಯವಾಗಬೇಕು. ಮಕ್ಕಳಲ್ಲಿ ಮೊಬೈಲ್ ಕೊಡುವುದಕ್ಕಿಂತ ಪುಸ್ತಕ ಕೊಡುವ ಮೂಲಕ ಓದುವ ಹವ್ಯಾಸ ಬೆಳೆಸಬೇಕಾಗಿದೆ.
ಕಲೆ, ಸಾಹಿತಿ, ಸಂಗೀತಗಾರರಿಗೆ, ಕಲಾವಿದರಿಗೆ ಗೌರವ ನೀಡಲು ಸರಕಾರ ಮುಂದಾಗಬೇಕು. ಪ್ರತಿ ಪಂಚಾಯಿತಿ ಮಟ್ಟದಿಂದ ಒಬ್ಬ ಸಾಹಿತಿ ಕವಿಯನ್ನು ಸನ್ಮಾನಿಸಲು ಸರಕಾರ ರೂಪರೇಶಗಳನ್ನು ಸಿದ್ದಪಡಿಸಬೇಕು. ಮಕ್ಕಳಗಾಗಿ ಯಾವುದೇ ಸಾಹಿತ್ಯ ಕಮ್ಮಟಗಳು ನಡೆಯುತ್ತಿಲ್ಲ, ಸರಕಾರದ ಅಕ್ಯಾಡವಿಗಳು ಈ ಕಾರ್ಯಗಳನ್ನು ಮಾಡುವಲ್ಲಿ ಎಡವುತ್ತಿವೆ. ಆ ದಿಸೆಯಲ್ಲಿ ಸರಕಾರಗಳು ಚಿಂತನೆ ಮಾಡಬೇಕು.
ಜ್ಞಾನಪೀಠ ಪಡೆದ ಎಲ್ಲಾ ಸಾಹಿತಿಗಳ ಪುಸ್ತಕಗಳನ್ನು ಸರಕಾರ ಎಲ್ಲಾ ಭಾಷೆಗಳಲ್ಲಿ ಪ್ರಕಟಿಸಲು ಕ್ರಮ ಜರುಗಿಸಿ ಸಾಹಿತ್ಯವನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕವಿ ಅಲ್ಲಾಗಿರಿರಾಜ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಪುಷ್ಪಾ ಮುರಗೋಡ ವಹಿಸಿದ್ದರು. ಹರದಾರಿ ಮಾತು ಪುಸ್ತಕ ಕುರಿತು ಪ್ರೋ ಸುರೇಶ ವಾರೆಪ್ಪನವರ ಮತ್ತು ಮಕ್ಕಳ ಆಟಗಳು ಕುರಿತು ಸಾಹಿತಿ ಡಾ.ದ್ರಾಕ್ಷಾಯಣಿ ಶಂಕರ ಮಾತನಾಡಿದರು.
ಕಾರ್ಯಕ್ರಮವನ್ನು ಶೈಲಾ ಕೊಕ್ಕರಿ ನಿರೂಪಿಸಿದರು, ಆನಂದ ಸೋರಗಾವಿ ವಂದಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ತಾವಂಶಿ , ಶ್ರೀಶೈಲ ದರೂರ, ಮಹೇಶ ನಾಯಿಕ, ಬಸವರಾಜ ಹಿರೇಮಠ, ಪ್ರೋ ಚಂದ್ರಶೇಖರ್ ಅಕ್ಕಿ, ವಸಂತರಾವ ಕುಲಕರ್ಣಿ, ಡಾ.ಸಿ.ಕೆ.ನಾವಲಗಿ, ಈಶ್ವರಚಂದ್ರ ಬೆಟಗೇರಿ , ಶ್ರೀಮತಿ ವಿದ್ಯಾ ರೆಡ್ಡಿ , ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ, ಗೋಕಾಕ ಗೆಳೆಯ ಬಳಗದ ಜಯಾನಂದ ಮಾದರ ಉಪಸ್ಥಿತರಿದ್ದರು

Related posts: