ಗೋಕಾಕ:ಹುಟ್ಟು ಸಾವು ಸೃಷ್ಟಿಯ ನಿಯಮ ಜೀವನದಲ್ಲಿ ಯಾವುದು ಶಾಶ್ವತವಲ್ಲ : ಮುರುಘರಾಜೇಂದ್ರ ಶ್ರೀ
ಹುಟ್ಟು ಸಾವು ಸೃಷ್ಟಿಯ ನಿಯಮ ಜೀವನದಲ್ಲಿ ಯಾವುದು ಶಾಶ್ವತವಲ್ಲ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 22 :
ಹುಟ್ಟು ಸಾವು ಸೃಷ್ಟಿಯ ನಿಯಮ ಜೀವನದಲ್ಲಿ ಯಾವುದು ಶಾಶ್ವತ ವಿಲ್ಲ ಇದನ್ನು ಅರಿತು ಮನುಷ್ಯ ತಮ್ಮ ಜೀವನವನ್ನು ನಡೆಸಿದರೆ ಅದು ಸಾರ್ಥಕವಾಗುತ್ತದೆ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನವಿವಾರದಂದು ಸಾಯಂಕಾಲ ತಾಲೂಕಿನ ಮಮದಾರಪೂರ ಗ್ರಾಮದ ಭಕ್ತರ ಮನೆಯಲ್ಲಿ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬಿಳ್ಳುವವರನ್ನು ಎತ್ತಿ ಹಿಡಿಯುವುದು ಮಾನವ ಧರ್ಮವಾಗಿದೆ. ಅಧಿಕಾರ ಶಾಶ್ವತವಲ್ಲ, ಹೆಂಡಿತಿ ಮಕ್ಕಳು ಶಾಶ್ವತವಲ್ಲ ಎಂಬ ಕಟ್ಟು ಸತ್ಯವನ್ನು ಅರಿತು ನುಡಿದಂತೆ ನಡೆದು ಬಾಳಿ ಬದುಕಬೇಕಾಗಿದೆ.
ಶರಣರು ಸತ್ಯ ಮತ್ತು ಸನ್ಮಾರ್ಗದಲ್ಲಿ ಜೀವನವನ್ನು ನಡೆಸಿ ನಮಗೆ ದಾರಿದೀಪವಾಗಿದ್ದಾರೆ ಆ ನಿಟ್ಟಿನಲ್ಲಿ ನಾವು ಸಹ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಸಮಾಜವನ್ನು ಗಟ್ಟಿಗೊಳಿಸಬೇಕಾಗಿದೆ. ಈ ಪವಿತ್ರ ಮಾಸದಲ್ಲಿ ಜನರು ತಮ್ಮ ಆತ್ಮಲಿಂಗವನ್ನು ಸ್ವಚಗೊಳಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ಮಾಡಿದರೆ ಬಾಳು ಬಂಗಾರವಾಗುತ್ತದೆ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಚರಮೂರ್ತಿ ಈಶ್ವರ ಸ್ವಾಮಿಜಿ ಮಮದಾಪೂರ, ಡಾ.ಬಸವರಾಜ ಚೌಗಲಾ ಶರಣರು, ಶ್ರೀ ವಿರಭದ್ದೇಶ್ವರ ಸ್ವಾಮೀಜಿ ಇದ್ದರು
ಆರ್.ಎಲ್.ಮಿರ್ಜಿ ನಿರೂಪಿಸಿದರು ಬಿ.ಆರ್.ಮುರಗೋಡ ಸ್ವಾಗತಿಸಿದರು