ಘಟಪ್ರಭಾ:ಸುಡುಗಾಡು ಸಿದ್ದರ ಓಣಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ : ಡಿ.ಎಂ.ದಳವಾಯಿ ಚಾಲನೆ
ಸುಡುಗಾಡು ಸಿದ್ದರ ಓಣಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ : ಡಿ.ಎಂ.ದಳವಾಯಿ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 27 :
ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಡುಗಾಡು ಸಿದ್ದರ ಓಣಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಹಿರಿಯರಾದ ಡಿ.ಎಂ.ದಳವಾಯಿ ಶುಕ್ರವಾರ ಚಾಲನೆ ನೀಡಿದರು.
ಸುಮಾರು 8 ವರ್ಷಗಳಿಂದ ತಕರಾರಿನಲ್ಲಿ ನೆನೆಗುದ್ದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಯು ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಇವರ ಸತತ ಪ್ರಯತ್ನದಿಂದ ಹಾಗೂ ಡಿ.ಎಮ್.ದಳವಾಯಿ ಇವರ ಸಹಕಾರದಿಂದ ಮತ್ತು ಪಿಂಟು ರಾಜಾಪೂರೆ ಹಾಗೂ ರಾಮು ರಾಜಾಪೂರೆ ಇವರು ಸಾರ್ವಜನಿಕರ ಹಿತದೃಷ್ಠಿಯಿಂದ ರಸ್ತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟ ಹಿನ್ನಲೆಯಲ್ಲಿ ಇಂದು ರಸ್ತೆ ಕಾಮಗಾರಿ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಅಶೋಕ್ ಕೋಳಿ, ಸಮಾಜದ ಮುಖಂಡರಾದ ಶಂಕರ ಪತ್ತಾಗೀರಿ, ವೀರಣ್ಣ ಸಂಗಮನವರ, ಸಣ್ಣದ್ಯಾಮಪ್ಪ ಕೋಮಾರಿ, ಈರಪ್ಪ ಮದ್ದಿ, ಮಾರು ಕೋಮಾರಿ, ಶಿವಾಜಿ ಗಂಟೆ, ಸಾಯಣ್ಣ ಕೋಮಾರಿ, ಸ್ವಾಮಿ ಕೋಮಾರಿ, ಸಣ್ಣಯಲ್ಲಪ್ಪ ಸಂಕನ್ನವರ, ಈರಪ್ಪ ಕೀನ್ನೂರಿ, ಧರ್ಮಪ್ಪ ಗಂಟೆನ್ನವರ, ರಾಜು ಮದ್ದಿ, ಆನಂದ ಪತಾಗಿರಿ, ದ್ಯಾಮಪ್ಪ ಗಾ.ಕೋಮಾರಿ, ಲಕ್ಷ್ಮಣ ಮದ್ದಿ, ಲಕ್ಷ್ಮಣ ಕೋಮಾರಿ, ಇನ್ನೂ ಸಮಾಜದ ನೂರಾರು ಜನ ಭಾಗವಹಿಸಿದ್ದರು.