RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾಮಿಜಿ

ಗೋಕಾಕ:ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾಮಿಜಿ 

ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾಮಿಜಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :

 
ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಬೇಕೆಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ರವಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಲ್ಲಿನ ಶಿವಯೋಗಿ ತತ್ವ ವಿಚಾರ ವೇದಿಕೆಯವರು ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ನಮ್ಮ ತನವನ್ನು ಪ್ರೀತಿಸಬೇಕು , ಬೇರೆತನವನ್ನು ಗೌರವಿಸಬೇಕು. ಧರ್ಮ ಮನುಷ್ಯನನ್ನು ನಿಗ್ರಹ ಮಾಡುವಂತೆ ಉಪದೇಶ ಮಾಡಿವೆ. ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಜನ ಶಿಕ್ಷಕರನ್ನು ಸಮಾಜದಲ್ಲಿ ಪೂಜ್ಯನೀಯ ಭಾವನಿಯಿಂದ ಕಾಣುತ್ತಾರೆ. ಅವರ ಋಣ ತೀರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಲ್ ಡಾ.ಪರಶುರಾಮ ನಾಯಿಕ ಅವರು ಮಕ್ಕಳ ಕಲಿಕೆಯಲ್ಲಿ ಸಮ್ಮೋಹನ ಬಳಕೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಆದರ್ಶ ಶಿಕ್ಷಕರಿಗೆ ಸತ್ಕರಿಸಿ,ಗೌರವಿಸಲಾಯಿತು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಮಹಾಂತೇಶ ತಾಂವಶಿ ಇದ್ದರು.

Related posts: