ಗೋಕಾಕ:ಯುವ ಪೀಳಿಗೆ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳಬೇಕು : ಸರ್ವೋತ್ತಮ
ಯುವ ಪೀಳಿಗೆ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳಬೇಕು : ಸರ್ವೋತ್ತಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 16 :
ಯುವ ಪೀಳಿಗೆ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದಲ್ಲಿ ಜೆಸಿಐ ಕರದಂಟು ಸಿಟಿ ಗೋಕಾಕ ನವರ ಹಮ್ಮಿಕೊಂಡಿದ್ದ ಜೆಸಿ ಸಫ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಹಿರಿಯರ ಮಾರ್ಗದರ್ಶನದಲ್ಲಿ ಯುವ ಪೀಳಿಗೆ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ನಾಗರಿಕರಾಗಿರಿ ದೇಶದ ಜನತೆ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಸಹಾಯ ಮಾಡುವ ಮೂಲಕ ಅವರ ಕಷ್ಟಗಳಲ್ಲಿ ಪಾಲ್ಗೋಳ್ಳಿ ಇಂತಹ ಕಾರ್ಯಗಳಲ್ಲಿಗೆ ಎಲ್ಲರು ತನು,ಮನ ಧನದಿಂದ ಸಹಕಾರ ನಿಡೋಣ ಎಂದರು.
ಇದೇ ಸಂದರ್ಭದಲ್ಲಿ ಕರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೇರವೆರಿಸಿದ ಬಜರಂಗದಳ ಕಾರ್ಯಕರ್ತರನ್ನು ಹಾಗೂ ಆನಾಥ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಇಲ್ಲಿನ ಶಿವಾ ಪೌಂಡೇಶನ್ ನ ಆನಂದ ಪೂಜಾರಿ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ಖಾರೇಪಾಟನ ವಹಿಸಿದ್ದರು.
ವೇದಿಕೆಯಲ್ಲಿ ಗಣ್ಯ ವರ್ತಕರಾದ ಮಹಾಂತೇಶ ತಾಂವಶಿ, ಜೆಸಿಐ ಸಂಸ್ಥೆಯ ಮಹಾವೀರ ಖಾರೇಪಾಟನ, ಡಾ.ಮಂಜುಳಾ ಚಿಕ್ಕಡೋಳಿ, ರಾಮಚಂದ್ರ ಕಾಕಡೆ ಇದ್ದರು.