RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸಲು ಹೋರಾಟಗಾರರ ಜೊತೆ ಸಾಹಿತಿಗಳು, ಬರಹಗಾರರು ಮತ್ತು ಲೇಖಕರು ಕೈಜೋಡಿಸಿ : ಡಾ. ಸಿ.ಕೆ ನಾವಲಗಿ

ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸಲು ಹೋರಾಟಗಾರರ ಜೊತೆ ಸಾಹಿತಿಗಳು, ಬರಹಗಾರರು ಮತ್ತು ಲೇಖಕರು ಕೈಜೋಡಿಸಿ : ಡಾ. ಸಿ.ಕೆ ನಾವಲಗಿ 

ಕನ್ನಡವನ್ನು ಉಳಿಸಿ ಬೆಳೆಸಲು ಹೋರಾಟಗಾರರ ಜೊತೆ ಸಾಹಿತಿಗಳು, ಬರಹಗಾರರು ಮತ್ತು ಲೇಖಕರು ಕೈಜೋಡಿಸಿ : ಡಾ. ಸಿ.ಕೆ ನಾವಲಗಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 2 :

 

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಟಗಾರರ ಜೊತೆ ಸಾಹಿತಿಗಳು , ಬರಹಗಾರರು ಮತ್ತು ಲೇಖಕರು ಮುಂದಾಗಬೇಕಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಸಿ.ಕೆ ನಾವಲಗಿ ಹೇಳಿದರು.

ನಗರದಲ್ಲಿ ಕರವೇ ಗೋಕಾಕ ತಾಲೂಕು ಘಟಕ ಹಮ್ಮಿಕೊಂಡ ಪತ್ರಕರ್ತ ಸಾದಿಕ ಹಲ್ಯಾಳ ರಚಿಸಿರುವ ” ಕರವೇ ಪಯಣ ” ಗ್ರಂಥದ ಮುಖಮುಟ ಬಿಡುಗಡೆ ಗೋಳಿ‌ಸಿ ಅವರು ಮಾತನಾಡಿದರು.

ಪ್ರಾದೇಶಿಕ ಭಾಷೆಗಳ ಮೇಲೆ ವ್ಯವಸ್ಥಿತವಾದ ಪ್ರಹಾರ ನಡೆಯುತ್ತಲೇ ಇದೆ.ಇಂತಹ ವ್ಯವಸ್ಥೆಯಲ್ಲಿ ಸಿಕ್ಕಿರುವರು ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು. ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ ಇಂತಹ ಸಂದರ್ಭದಲ್ಲಿ ರಾಜಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಕರವೇ ಎಂಬ ಕನ್ನಡದ ಸೇನೆ ಕಟ್ಟಿ ಕನ್ನಡವನ್ನು ಗಟ್ಟಿಗೊಳಿಸುತ್ತಿರುವ ಕರವೇಯ ಚಿತ್ರಣವನ್ನು ಗ್ರಂಥದ ರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿರುವ ಗ್ರಂಥ ಲೇಖಕ ಸಾದಿಕ ಹಲ್ಯಾಳ ಅವರ ಕಾರ್ಯ ಶ್ಲಾಘನೀಯವಾಗಿದೆ ಕರವೇ ಜಿಲ್ಲಾ ಸಂಘಟನೆಯಿಂದ ಇನ್ನಷ್ಟು ಮತ್ತಷ್ಟು ಕಾರ್ಯಗಳು ಸಂಘಟನೆಗೊಳ್ಳಲ್ಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಶೈಲಾ ಕೊಕ್ಕರಿ ನಿರೂಪಿಸಿ, ವಂದಿಸಿದರು.

ವೇದಿಕೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ ಮಹಾದೇವ ತಳವಾರ, ಸುರೇಶ್ ಗವ್ವನವರ , ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರವೇ ಜಿಲ್ಲಾ ಸಂಚಾಲಕರಾದ ಬಾಳು ಜಡಗಿ, ಸಂಜು ಬಡಿಗೇರ, ಹೊಳೆಪ್ಪ ಸುಲದಾಳ, ದೇವೇಂದ್ರ ತಳವಾರ, ಕೃಷ್ಣಾ ಖಾನಪ್ಪನವರ, ಕರೆಪ್ಪ ಕೊಚ್ಚರಗಿ, ಬಸವರಾಜ ಅವರೋಳ್ಳಿ, ರಮೇಶ ತಳವಾರ, ಗಜಾನನ ಶಿಂಗೆ , ಗ್ರಂಥದ ಲೇಖಕ ಸಾದಿಕ ಹಲ್ಯಾಳ ಸೇರಿದಂತೆ ಕರವೇ ಎಲ್ಲ ತಾಲೂಕು ಅಧ್ಯಕ್ಷರುಗಳು ,ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: