RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ

ಘಟಪ್ರಭಾ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ 

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :

 
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಅವರು ಶನಿವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದ ಒಂದು ಕೋಟಿ ಹತ್ತು ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಜಿ.ಪಂ ಯೋಜನೆಯಡಿಯಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ರಸ್ತೆ, ಜಿ.ಎಲ್.ಬಿಸಿ ನೀರಾವರಿ ಇಲಾಖೆವತಿಯಿಂದ ಅಂದಾಜು 30 ಲಕ್ಷ ರೂ.ವೆಚ್ಚದ ಕಾಂಕ್ರೇಟ ರಸ್ತೆ ಮತ್ತು ಚರಂಡಿ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 10 ಲಕ್ಷ ರೂ.ವೆಚ್ಚದ ಸಾರ್ವಜನಿಕ ಶೌಚಾಲಯ, ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ಎಸ್.ಸಿ.ಕಾಲೋನಿಯಲ್ಲಿ ಅಂದಾಜು 10 ಲಕ್ಷ ರೂ.ವೆಚ್ಚದ ಕಾಂಕ್ರೇಟ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಗೋಕಾಕ ಮತಕ್ಷೇತ್ರದ ಅಭಿವೃದ್ಧಿ ಏಳ್ಗೆಗೆ ಶಾಸಕ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದು ಅವರ ಪ್ರಯತ್ನಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಗೋಕಾಕ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಸತತ ಪರಿಶ್ರಮ ಮಾಡುತ್ತಿದ್ದು ನಾವೆಲ್ಲರೂ ಅವರಿಗೆ ಕೈ ಜೋಡಿಸೋಣ. ಶಾಸಕ ರಮೇಶ ಜಾರಕಿಹೊಳಿ ಅವರು ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಕಾಮಗಾರಿಗಳ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಗ್ರಾಮದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಜಾರಿಗೆ ತರುವ ಮೂಲಕ ಮಾದರಿ ಗ್ರಾಮವನ್ನಾಗಿಸಲು ಗ್ರಾಮದ ಮುಖಂಡರ ಮತ್ತು ಗ್ರಾಮ ಪಂಚಾಯತ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಅಂಬಿರಾವ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ವಿಠ್ಠಲ ದೇವರ ಮತ್ತು ಶ್ರೀ ಬಸವೇಶ್ವರ ದೇವಋಷಿಗಳಾದ ಮುರೇಪ್ಪ ಪೂಜೇರಿ, ಬಸವಣ್ಣಿ ಕಬ್ಬೂರ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಪಾಟೀಲ, ಉಪಾಧ್ಯಕ್ಷ ಭೀಮಶಿ ಬಿರನಾಳಿ, ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ, ಮುಖಂಡರುಗಳಾದ ಗುರು ಕಡೇಲಿ, ನಿಂಗಪ್ಪ ಬಂಬಲಾಡಿ, ಸುಧೀರ ಜೋಡಟ್ಟಿ, ಅಡಿವೆಪ್ಪ ಬೆಳಗಲಿ, ಸತ್ತೇಪ್ಪ ಹೊನ್ನಪ್ಪಗೋಳ, ಶಂಕರ ನೀಲಗಾರ, ಗೋವಿಂದ ಗಾಡಿವಡ್ಡರ, ಹಾಲಪ್ಪ ಕರಿಗಾರ, ಮಹಾಂತೇಶ ಹಳ್ಳಿ, ನಾಗಲಿಂಗ ಪತ್ತಾರ, ಜ್ಯೋತ್ತೆಪ್ಪ ಬಂತಿ, ಸಿದ್ದಾರೂಢ ಕಂಬಾರ, ಅಮೃತ ಕಾಳ್ಯಾಗೋಳ, ಸುರೇಶ ದೇವಮಾನೆ, ಭೀಮಣ್ಣ ಕಳಸನ್ನವರ, ಮಾರುತಿ ಶಿರಗುರಿ, ಮಹಾನಿಂಗ ತೆಳಗೇರಿ, ಶಂಕರ ಕಟ್ಟಿಮನಿ, ಪರಸಪ್ಪ ಕೋಳಿ, ಶಂಕರ ಬಡಿಗೇರ, ಶ್ರೀಕಾಂತ ಬಡಿಗೇರ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Related posts: