RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ

ಘಟಪ್ರಭಾ:ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ 

ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 11 ;

 
ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಸ್ವಚ್ಛತೆಯೇ ಆರೋಗ್ಯದಡಿ ಕಾರ್ಯಕ್ರಮದಲ್ಲಿ ಗೋಕಾಕ್ ಜಲಪಾತದ ಸ್ವಚ್ಛತೆಯ ಕಾರ್ಯಕ್ರವನ್ನು ರವಿವಾರದಂದು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ್ದ ನಾಲವತ್ತಕ್ಕೂ ಹೆಚ್ಚಿನ ಕಾರ್ಯಕರ್ತರು, ಹುರುಪಿನಿಂದ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ನಿರತರಾಗಿದ್ದರು.

ವಾರಾಂತ್ಯಗಳಲ್ಲಿ ಮೋಜು ಮಸ್ತಿಗೆಂದು ಬಂದು ಪ್ರಕೃತಿಯೊಡಲೀನ ಸುಂದರ ಜಲಪಾತವನ್ನು ಪ್ಲ್ಯಾಸ್ಟಿಕ್ ಕಸದ ಜೊತೆಗೆ ತಾವು ತಿಂದುಂಡ ಪ್ಲೇಟ್‍ಗಳನ್ನು ಸಹ ಅಲ್ಲಿಯೇ ಬಿಸಾಡಿ, ಪರಿಸರದ ಸ್ವಾಸ್ಥ್ಯವನ್ನು ಜೊತೆಗೆ ಪ್ರೇಕ್ಷಣೀಯ ಸ್ಥಳದ ಸ್ವಚ್ಛತೆಯನ್ನು ಹಾಳು ಮಾಡುವವರ ನಡುವೆ, ಯುವ ಬ್ರಿಗೇಡ್ ಯುವಕರು ಮಾದರಿಯಾಗಿ ನಿಂತಿದ್ದರು.

ತಮ್ಮ ವಾರಾಂತ್ಯವನ್ನು ವ್ಯಥಾ ಸುಮ್ಮನೇ ಮೋಜಿನಲ್ಲಿ ವ್ಯಯಿಸದೆ, ಶ್ರಮದಾನದ ಮೂಲಕ ಜಲಪಾತದ ದಂಡೆಯಲ್ಲಿದ್ದ ರಾಶಿ ರಾಶಿ ಕಸವನ್ನು ಹೆಕ್ಕಿ ತೆಗೆದುದಷ್ಟೇ ಅಲ್ಲದೆ, ಅಲ್ಲಿ ಕಸವನ್ನು ಸರಿಯಾಗಿ ನಿರ್ವಹಿಸುವಂತೆ ಸ್ಥಳೀಯ ಜನರಿಗೆ ಮನವರಿಕೆಯನ್ನು ಮಾಡಿ ಕೊಟ್ಟರು.

ಜಲಪಾತದ ಮಹತ್ವ ಹಾಗೂ ಅದನ್ನ ನೋಡಲು ದೇಶದ ಎಲ್ಲೆಡೆಯಿಂದ ಆಗಮಿಸುವ ಜನರ ಕಣ್ಣಲ್ಲಿ ನಮ್ಮ ಜಲಪಾತವನ್ನು ನಾವುಗಳು ಹೇಗೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಮತ್ತು ಅದು ಯಾಕೆ ಅವಶ್ಯಕ ಎಂದು ಯುವಾ ಬ್ರಿಗೇಡ್ ನ ಉತ್ತರ ಭಾಗದ ರಾಜ್ಯ ಸಂಚಾಲಕರಾದ ವರ್ಧಮಾನ ತ್ಯಾಗಿ ಅವರು ಸ್ಥಳೀಯರಿಗೆ ಮನದಟ್ಟು ಮಾಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಯುವಾ ಬ್ರಿಗೇಡ್ ಸಂಚಾಲಕರು, ಸಹ ಸಂಚಾಲಕರು ಹಾಗೂ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.

Related posts: