RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ 

ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17:

 
ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.  

ಅವರು ಶನಿವಾರದಂದು ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗೋಕಾಕ ತಾಲ್ಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡೆ ಮನೆ ಬಾಗಿಲಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದರ ಅಂಗವಾಗಿ ಗೋಕಾಕ ತಾಲೂಕಿನ ಕೌಜಲಗಿ ಹೋಬಳಿಯ ರಡ್ಡೆರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ರಡ್ಡೆರಹಟ್ಟಿ ಗ್ರಾಮದ ಯಾವುದೇ ಸಮಸ್ಯೆಗಳಿದ್ದರೆ ತಮ್ಮ ಮನೆ ಭೇಟಿಗೆ ಅಧಿಕಾರಿಗಳು ಬಂದಾಗ ಅವರ ಗಮನಕ್ಕೆ ತರಬೇಕು. ಮತ್ತು ತಮಗೆ ಸರ್ಕಾರದ ಯೋಜನೆಗಳು ಯಾಕೆ ಸಿಗುತ್ತಿಲ್ಲ.  ಅದಕ್ಕಾಗಿ ತಾವು ಯಾವ ರೀತಿ ಪ್ರಯತ್ನಿಸಬೇಕು ಎಂಬ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲಿಯೇ ಪರಿಹಾರ ಕಂಡುಗೊಳ್ಳಬೇಕು ಎಂದು ಹೇಳಿದರು.   
ಇದೇ ಸಂದರ್ಭದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಒಟ್ಟು 32 ಅರ್ಜಿಗಳನ್ನು ಸ್ವೀಕರಿಸಿ , ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ಗ್ರಾಮದಲ್ಲಿ ಸಸಿ ನೆಡುವ ಕಾರ್ಯಕ್ರಮ, ಮಕ್ಕಳೊಡನೆ ಸಂವಾದ, ಕಾನೂನು ಅರಿವು ಮತ್ತು ವಾರ್ಡ್ ಗಳ ಭೇಟಿ ಕಾರ್ಯಕ್ರಮ ನಡೆಸಲಾಯಿತು.ಆರೋಗ್ಯ ಶಿಬಿರವನ್ನು ಆಯೋಜಿಸಿ, ಸದರಿ ಶಿಬಿರದಲ್ಲಿ ಎನ್.ಸಿ.ಡಿ ಕಾಯ೯ಕ್ರಮ ಒಟ್ಟು ಕೇಸ್-107 ಬಿಫಿ ಕೇಸ್- 25, ಮಧುಮೇಹ -20, ಕೋವಿಡ್ ಆರ್.ಟಿ.ಪಿ.ಸಿ.ಆರ್ ಟೆಸ್ಟ್ -100, ಕಣ್ಣಿನ ತಪಾಸಣೆ -28, ಕಣ್ಣಿನ ಪೋರೆ-12, ಆರ್.ಬಿ.ಎಸ್‌.ಕೆ ವೈಧ್ಯರಿಂದ 0-19 ಮಕ್ಕಳ ತಪಾಸಣೆ -18, ಲಸಿಕಾ ಕಾರ್ಯಕ್ರಮದಲ್ಲಿ- ಬಿ.ಸಿ.ಜಿ.-4 ಪೆಂಟಾ 1st -3, 2nd -2, 3rd -6 ಎಂಆರ್1 -5 ಎಂಆರ್ 2 -2 ಬಿಡಿ -2 ,ಎ,ಎನ್.ಸಿ ಟಿಟಿ -2 ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ವಲಯ ಅರಣ್ಯಾಧಿಕಾರಿ ಕೆ.ಎನ.ವಣ್ಣೂರ , ಜನ್ಮಟ್ಟಿ, ಎಂ.ಎಂ ನಧಾಫ, ಸುಮನ್ ಜಾಧವ್ , ಡಾ. ಮುತ್ತಣ್ಣ ಕೊಪ್ಪದ , ಎಸ್.ವ್ಹಿ, ಕಲ್ಲಪ್ಪನವರ್ , ಉಪ ತಹಸೀಲ್ದಾರ್ ಸಾಗರ್ ಕಟ್ಟಿಮನಿ ,ಸುಂದರ ಪೂಜೇರ ಸೇರಿದಂತೆ ಗ್ರಾ.ಪಂ ಸದಸ್ಯರು , ರಾಜಕೀಯ ಧುರೀಣರು ಉಪಸ್ಥಿತರಿದ್ದರು .

Related posts: