RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಕ್ಯಾಂಪಸ್ ಸಂದರ್ಶನ ಕೆಎಲ್ಇ ಕಾಲೇಜಿನ 88 ಜನ ವಿದ್ಯಾರ್ಥಿಗಳ ಆಯ್ಕೆ

ಗೋಕಾಕ:ಕ್ಯಾಂಪಸ್ ಸಂದರ್ಶನ ಕೆಎಲ್ಇ ಕಾಲೇಜಿನ 88 ಜನ ವಿದ್ಯಾರ್ಥಿಗಳ ಆಯ್ಕೆ 

ಕ್ಯಾಂಪಸ್ ಸಂದರ್ಶನ ಕೆಎಲ್ಇ ಕಾಲೇಜಿನ 88 ಜನ ವಿದ್ಯಾರ್ಥಿಗಳ ಆಯ್ಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 26 :

 
ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಐ.ಟಿ.ಐ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ HONDA MOTOR CYCLE AND SCOOTER INDIA Pvt Ltd KOLAR ಕಂಪನಿಯ ಕ್ಯಾಂಪಸ್ ಸಂದರ್ಶನವನ್ನು ಕಾಲೇಜಿನ ಪ್ರಾಚಾರ್ಯರಾದ ಪಿ.ಎ.ಪಾಟೀಲರ ಮಾರ್ಗದರ್ಶನದಲ್ಲಿ ರವಿವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯ ಅಧ್ಯಕ್ಷತೆಯನ್ನು ಜೆ.ಎಮ್. ಮುನವಳ್ಳಿ, ಆಡಳಿತ ಮಂಡಳಿ ಸದಸ್ಯರು, ಕೆ.ಎಲ್.ಇ. ಸಂಸ್ಥೆ ಇವರು ವಹಿಸಿದ್ದರು. ಉಪಸ್ಥಿತಿಯನ್ನು ಸ್ಥಳೀಯ ಆಡಳಿತ ಮಂಡಳಿ ಚೇರಮನ್ನರಾದ ಎಂ.ಡಿ. ಚುನಮರಿ ವಹಿಸಿದ್ದರು. ಅವರು ಕಾರ್ಯವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಈ ರೀತಿಯ ಕ್ಯಾಂಪಸ್ ಸಂದರ್ಶಗಳು ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ ಹಾಗೂ ಇದರ ಸದುಪಯೋಗ ಪಡೆದುಕೊಂಡ ನಮ್ಮ ಸಂಸ್ಥೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಕ್ಯಾಂಪಸ್ ಸಂದರ್ಶನದಲ್ಲಿ 100 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 88 ಜನ ವಿದ್ಯಾರ್ಥಿಗಳು HONDA MOTOR CYCLE Pvt Ltd KOLAR ಕಂಪನಿಗೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕೆ.ವಿ. ಕುಲಕರ್ಣಿ ನಿರೂಪಿಸಿ ಸ್ವಾಗತಿಸಿದರು, ವ್ಹಿ.ಆಯ್.ವಾಲಿ ವಂದಿಸಿದರು.

Related posts: