ಗೋಕಾಕ:ಸಾಂಸ್ಕೃತಿವಾಗಿ ಹಿರಿಮೆ ,ಗರಿಮೆ ಹೊಂದಿದ ನಾಡು ಕರ್ನಾಟಕ : ತಹಶೀಲ್ದಾರ ಪ್ರಕಾಶ ಅಭಿಮತ
ಸಾಂಸ್ಕೃತಿವಾಗಿ ಹಿರಿಮೆ ,ಗರಿಮೆ ಹೊಂದಿದ ನಾಡು ಕರ್ನಾಟಕ : ತಹಶೀಲ್ದಾರ ಪ್ರಕಾಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :
ಸಾಂಸ್ಕೃತಿವಾಗಿ ಹಿರಿಮೆ ,ಗರಿಮೆ ಹೊಂದಿದ ನಾಡು ಕರ್ನಾಟಕ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.
ಸೋಮವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿಚ ವತಿಯಿಂದ ಹಮ್ಮಿಕೊಂಡು ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕನ್ನಡ ಕಲಿಯಲು ಪ್ರೋತ್ಸಾಹ ಮಾಡಬೇಕು. ಆಗ ಮಾತ್ರ ಕನ್ನಡ ಉಳಿದು ಬೆಳೆಯಲು ಸಾಧ್ಯ . ಕನ್ನಡ ನಾಡು ಗಂಧದ ನಾಡು, ಪ್ರಕೃತಿಕವಾಗಿ ಸುಂದರ ನಾಡು ನಮ್ಮದು,ಪಂಪನಿಂದ ಹಿಡಿದು ಕಂಬಾರರವರೆಗೆ ಕವಿಗಳಿಂದ ತುಂಬಿದ ಸಾಹಿತ್ಯದ ಬಿಡು ನಮ್ಮ ಕನ್ನಡ ನಾಡು , ಇಂಥ ಸುಂದರ ಕನ್ನಡ ಭಾಷೆ ಕೇವಲ ನುಡಿ ಮಾತ್ರವಾಗದೆ ಅಂತರಂಗದ ಮಾತಾಗಬೇಕು, ಕನ್ನಡ ಭಾಷೆ ,ಕನ್ನಡ ಸಂಸ್ಕೃತಿ, ನೆಲ ,ಜಲ, ಇವುಗಳನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಹಿರಿಯ ಸಾಹಿತಿ ಅಶೋಕಬಾಬು ನಿಲಗಾರ ಅವರಿಗೆ ತಾಲೂಕಾಡಳಿತದ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಸವಣ್ಣೆಪ್ಪ ಕಳ್ಳಿಗುದ್ದಿ , ಬಿ.ಆರ್.ಕೊಪ್ಪ , ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ,ಉಪಾಧ್ಯಕ್ಷ ಬಸವರಾಜ ಆರೆನ್ನವರ, ಕರವೇ ಮುಖಂಡರಾದ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಮುಖಂಡರುಗಳಾದ ಅಶೋಕ ಪೂಜಾರಿ, ಸೋಮಶೇಖರ್ ಮಗದುಮ್ಮ,ಎಸ್.ಎಸ್.ಅಂಗಡಿ, ಅಧಿಕಾರಿಗಳಾದ ಬಿಇಒ ಜಿ.ಬಿ.ಬಳಗಾರ, ಶಿವಾನಂದ ಹಿರೇಮಠ, ಡಾ.ಎಂ.ಎಸ್. ಕೊಪ್ಪದ, ಎಂ.ಎಚ್.ಗಜಾಕೋಶ ,ಕೆ.ಎನ್.ವಣ್ಣೂರ, ಎಂ.ಎಂ ನಧಾಫ, ಎಂ ಎಲ್.ಜನ್ಮಟ್ಟಿ, ಜಯಶ್ರೀ ಶಿಲವಂತ ಉಪಸ್ಥಿತರಿದ್ದರು.