RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಜ್ಞಾನದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ : ನ್ಯಾಯಾಧೀಶ ವಿಜಯಕುಮಾರ್ ಎಂ ಎ

ಗೋಕಾಕ:ಜ್ಞಾನದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ : ನ್ಯಾಯಾಧೀಶ ವಿಜಯಕುಮಾರ್ ಎಂ ಎ 

ಜ್ಞಾನದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ : ನ್ಯಾಯಾಧೀಶ ವಿಜಯಕುಮಾರ್ ಎಂ ಎ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :

 
ಜ್ಞಾನದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ. ಜ್ಞಾನವಂತರಾಗಿ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ನ್ಯಾಯಾಧೀಶ ವಿಜಯಕುಮಾರ್ ಎಂ ಎ ಹೇಳಿದರು.

ಸೋಮವಾರದಂದು ಇಲ್ಲಿನ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡ ಉಪ ಕಾರಾಗೃಹ ಗೋಕಾಕ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿ ಚಿಕ್ಕೋಡಿ ರವರ ಸಹಯೋಗದಲ್ಲಿ ಉಪ ಕಾರಾಗೃಹ ಗೋಕಾಕದಲ್ಲಿನ ಅನಕ್ಷರಸ್ಥ ಬಂಧಿಗಳಿಗೆ ಅಕ್ಷರಭ್ಯಾಸ ಮಾಡಿಸಿ ಸಾಕ್ಷರರನ್ನಾಗಿಸುವ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ಕಾಲದಲ್ಲಿಯೂ ಸಹ 40 ವರ್ಷದಲ್ಲಿ ಸಾಕ್ಷರತೆ ಮಾಡುತ್ತೆವೆ ಎಂದು ಹೇಳಿದ್ದರು ಆದರೆ ಈಹೊತ್ತಿಗೆ 140 ವರ್ಷವಾದರೂ ಸಹ ಸಾಕ್ಷರತೆ ಪ್ರಾಮಾಣ ಪರಿಪೂರ್ಣವಾಗಿಲ್ಲ ಇದು ನಮ್ಮ ದುರ್ಧೈವವಾಗಿದೆ. ಇಂಥ ಸಂದರ್ಭದಲ್ಲಿ ಸರಕಾರ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಅಕ್ಷರಭ್ಯಾಸ ಕಲಿಸಲು ಮುಂದಾಗಿದೆ ಇದರ ಸದುಪಯೋಗದಿಂದ ಅನಕ್ಷರಸ್ಥ ಖೈದಿಗಳು ತಮ್ಮ ಜೀವನವನ್ನು ರೂಪಿಸಕೊಳ್ಳಬಹುದಾಗಿದೆ. ಕಾರಾಗೃಹದಲ್ಲಿ ಪಡೆದ ಜ್ಞಾನವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕು ಎಂದು ವಿಜಯಕುಮಾರ್ ಎಂ ಎ ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬಿಇಒ ಬಿ.ಜಿ.ಬಳಗಾರ ಭೂಮಿ ಮೇಲೆ ಹುಟ್ಟಿದ ಮೇಲೆ ಅದಕ್ಕೊಂದು ಸಾರ್ಥಕತೆ ಬರಬೇಕು. ಬದುಕಿನಲ್ಲಿ ಸಾರ್ಥಕತೆ ಬರೆಬೇಕಾದರೆ ಶಿಕ್ಷಣದ ಪಾತ್ರ ಬಹುಮುಖ್ಯವಾಗಿದೆ. ಆ ಕಾರ್ಯ ರಾಜ್ಯದ ಎಲ್ಲಾ ಉಪ ಕಾರಾಗೃಹದಲ್ಲಿ ನಡೆಯುತ್ತಿದೆ ಇದರ ಲಾಭ ಪಡೆದುಕೊಂಡು ಸುಶಿಕ್ಷಕರಾಗಬೇಕು. ಅದರ ಜೊತೆಗೆ ತಮ್ಮ ಮನ ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ದೀಪಾ ಜಿ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಯಬಾಗ ಬಿಇಒ ಶ್ರೀಮತಿ ಪ್ರಭಾವತಿ ಪಾಟೀಲ, ಉಪ ಕಾರಾಗೃಹದ ಅಧಿಕ್ಷಕರಾದ ಅಂಬರೀಷ್ ಪೂಜಾರಿ, ಎ.ಕೆ ಅನ್ಸಾರಿ, ಎಂ.ಕೆ ನೆಲಧರಿ, ಬಿ.ಆರ್. ಮುರಗೋಡ , ಮಹಾಂತೇಶ ನಾಯಿಕ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಕಾರಾಗೃಹದ ಮುಖ್ಯ ವೀಕ್ಷಕ ಶಕೀಲ ಜಕಾತಿ ನಿರೂಪಿಸಿ, ವಂದಿಸಿದರು.

Related posts: