RNI NO. KARKAN/2006/27779|Saturday, October 19, 2024
You are here: Home » breaking news » ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ

ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ 

ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ
ಚಿಕ್ಕೋಡಿ ಸೆ 20: ಮಹಾ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ .

ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಅರ್ಭಟದಿಂದ ಚಿಕ್ಕೋಡಿ ಭಾಗದ ಕೃಷ್ಣಾ ,ದೂಧಗಂಗಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಪ್ರವಾಹ ಉಂಟಾಗಿದ್ದು , ಜನರು ಆತಂಕಗೊಂಡಿದ್ದಾರೆ .

ಚಿಕ್ಕೋಡಿ ತಾಲೂಕಿನ ಕಲ್ಲೋಳ – ಯಡೂರ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು , ಕುಸಿಯುವ ಭೀತಿ ಎದುರಾಗಿದೆ ಸುತ್ತಲ ಗ್ರಾಮಗಳ ಸಂಪರ್ಕ ಮಾರ್ಗವಾಗಿದ್ದ ಸೇತುವೆಗಳು ಜಲಾವೃತ ಗೊಂಡಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ

Related posts: