ಗೋಕಾಕ:ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ 2ನೇ ಸ್ಥಾನ
ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ 2ನೇ ಸ್ಥಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 9 :
ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಕುಮಾರ್ ಮಹಾಂತಯ್ಯ.ಮಲ್ಲಿಕಾರ್ಜುನ ಮಠದ ಇತನು ಹರಿಯಾಣ ರಾಜ್ಯದ ಎಂ.ಡಿ ವಿವಿಯಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋಬಾಲ ಪಂದ್ಯದಲ್ಲಿ 2ನೇ ಸ್ಥಾನ ಪಡೆದಿದ್ದಾನೆ.
ಇತನ ಸಾಧನೆಗೆ ಅರಭಾಂವಿ ಶಾಸಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ, ಗೋಕಾಕ ಕ್ಷೇತ್ರದ ಶಾಸಕ ರಮೇಶ .ಜಾರಕಿಹೋಳಿ ಚಿಕ್ಕೋಡಿ ಜಿಲ್ಲಾ ಉಪನಿರ್ದೇಶಕ, ಬಿಇಒ ಜಿ.ಬಿ.ಬಳಿಗಾರ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕ ವರ್ಗದ ಹರ್ಷ ವ್ಯಕ್ತಪಡಿಸಿದ್ದಾರೆ.