RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಈ ಬಾರಿಯ ಕಾಯಕಶ್ರೀ ಪ್ರಶಸ್ತಿಗೆ ಶ್ರೀಮತಿ ಕಿರಣ ಬೇಡಿ ಆಯ್ಕೆ : ಮುರುಘರಾಜೇಂದ್ರ ಶ್ರೀ ಮಾಹಿತಿ

ಗೋಕಾಕ:ಈ ಬಾರಿಯ ಕಾಯಕಶ್ರೀ ಪ್ರಶಸ್ತಿಗೆ ಶ್ರೀಮತಿ ಕಿರಣ ಬೇಡಿ ಆಯ್ಕೆ : ಮುರುಘರಾಜೇಂದ್ರ ಶ್ರೀ ಮಾಹಿತಿ 

ಈ ಬಾರಿಯ ಕಾಯಕಶ್ರೀ ಪ್ರಶಸ್ತಿಗೆ ಶ್ರೀಮತಿ ಕಿರಣ ಬೇಡಿ ಆಯ್ಕೆ : ಮುರುಘರಾಜೇಂದ್ರ ಶ್ರೀ ಮಾಹಿತಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 14 :

 
ಬರುವ ಫೆಬ್ರವರಿಯಲ್ಲಿ ಜರಗುವ 17ನೇ ಶರಣ ಸಂಸ್ಕøತಿ ಉತ್ಸವದಲ್ಲಿ ಶ್ರೀಮಠದಿಂದ ನೀಡುವ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ನಿವೃತ್ತ ಐಪಿಎಸ್ ಅಧಿಕಾರಿ ಮಾಜಿ ರಾಜ್ಯಪಾಲೆ ಶ್ರೀಮತಿ ಕಿರಣ ಬೇಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಶನಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದಲ್ಲಿ 17ನೇ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾಯಕಶ್ರೀ ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಬರುವ ಫೆಬ್ರವರಿ 1,2,3 ಮತ್ತು 4 ರಂದು ನಾಲ್ಕು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಜರುಗಲಿದ್ದು, ಫೆಬ್ರವರಿ 1ರಂದು ಶರಣ ಸಂಸ್ಕøತಿ ಉತ್ಸವದ ಉದ್ಘಾಟನೆ,2 ರಂದು ಜರುಗುವ ಕಾರ್ಯಕ್ರಮದಲ್ಲಿ ಈ ಸಾಧಕರಿಗೆ ಕಾಯಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು, 3 ರಂದು ನ್ಯಾಯವಾದಿಗಳ ಸಮಾವೇಶ, 4 ರಂದು ನಡೆಯುವ ಯುವಗೋಷ್ಠಿಯಲ್ಲಿ ಭಾರತೀಯ ಶಿಕ್ಷಣ ಮಂಡಳದ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಬಿ.ಆರ್. ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ನಗರದ ಗುರುವಾರ ಪೇಠದಿಂದ ಪ್ರಾರಂಭವಾದ ಈ ಶರಣ ಸಂಸ್ಕೃತಿ ಉತ್ಸವವು ಇಂದು ಜಿಲ್ಲೆಯಲ್ಲೆಯೇ ಮಾದರಿಯ ಕಾರ್ಯಕ್ರಮವಾಗಿ ಭಕ್ತರ ಸಹಕಾರದಿಂದ ಗೋಕಾವಿ ನಾಡಿನ ಸಾಂಸ್ಕøತಿಕ ಉತ್ಸವವಾಗಿ ಪರಿವರ್ತನೆಯಾಗಿದೆ. ಈ ನಾಡಿನ ಸಮೃದ್ಧಿಗಾಗಿ ಮುಂದಿನ ದಿನಗಳಲ್ಲಿ ಬಸವ-ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ವರ್ಷದಿಂದ ವರ್ಷಕ್ಕೆ ಉತ್ಸವವು ಬೆಳೆಯುತ್ತಿದ್ದು ತುಂಬಾ ಸಂತೋಷ ತಂದಿದೆ ತಾಲೂಕಿನ ಎಲ್ಲ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸುಗೋಳಿಸಲು ಸಹಕರಿಸಬೇಕೆಂದು ಶ್ರೀಗಳು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ 17ನೇ ಶರಣ ಸಂಸ್ಕೃತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಣಧೋಳಿ ಗ್ರಾಮದ ಸಿ.ಎಸ್. ವಾಲಿ ಅವರನ್ನು , ಕಾರ್ಯದರ್ಶಿಯನ್ನಾಗಿ ನ್ಯಾಯವಾದಿ ಶಂಕರ ಗೋರೋಶಿ ಹಾಗೂ ಖಜಾಂಚಿಯಾಗಿ ಸಂಜಯ ಹೊಸಕೋಟಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮುಖಂಡ ಅಶೋಕ ಪೂಜಾರಿ, ಸೇರಿದಂತೆ ಅನೇಕರು ಇದ್ದರು.

Related posts: