RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ: ಗೋಕಾಕದಲ್ಲಿ ಪ್ರತಿಭಟನೆ, ಸರಕಾರಕ್ಕೆ ಮನವಿ

ಗೋಕಾಕ:ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ: ಗೋಕಾಕದಲ್ಲಿ ಪ್ರತಿಭಟನೆ, ಸರಕಾರಕ್ಕೆ ಮನವಿ 

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ: ಗೋಕಾಕದಲ್ಲಿ ಪ್ರತಿಭಟನೆ, ಸರಕಾರಕ್ಕೆ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 2 :

 
ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ ಮತ್ತು ತ್ರಿಪುರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ಗುರುವಾರದಂದು ಜಮಿಯತ ಉಲ್ಮಾ ಗೋಕಾಕ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು‌

ವಸೀಂ ರಿಜ್ವಿ ಎಂಬುವರು ಪದೇ ಪದೇ ಮೊಹಮ್ಮದ್‌ ಪೈಗಂಬರ್‌ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಅವರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅವರ ಮಾತುಗಳಿಂದ ಮುಸ್ಲಿಂ ಸಮಾಜದವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ತ್ರಿಪುರ ರಾಜ್ಯದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಅದನ್ನು ನೋಡಿಕೊಂಡು ಮೌನ ವಹಿಸಿರುವುದು ಸರಿಯಲ್ಲ. ಅಮಾಯಕರ ಪ್ರಾಣ, ಆಸ್ತಿ ರಕ್ಷಿಸಬೇಕೆಂದು ಆಗ್ರಹಿಸಿದರು.

ದೇಶದಾದ್ಯಂತ ನೆಲೆಸಿರುವ ಮುಸ್ಲಿಮರ ಪ್ರಾಣ, ಅವರ ಧಾರ್ಮಿಕ ಸ್ಥಳಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಪ್ರವಾದಿ ಮೊಹಮ್ಮದ್‌ ಪೈಗಂಬರ್‌, ಕುರಾನ್‌ ಬಗ್ಗೆ ಅವಹೇಳನಕಾರಿ ಮಾತನಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ನರಸಿಂಗಾನಂದ, ವಸಿಂ ರಿಜ್ವಿ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಮುಫ್ತಿ ಖಾಜಾ, ಖಾರಿ ಜಬಿವುಲ್ಲಾ , ಸದಾಖತ ಅಲ್ಲಿ , ಪೈಯಾಜ ಅವಟಿ, ಇಫ್ತಿಯಾನ ಕುಂಬಾರಿ, ಅಜಿಂ ಚಿಕ್ಕಕುದರಿ, ಮೊಹಮ್ಮದ್ ಅಸೀಪ ಇನಾಮಿ, ಅಬ್ದುಲ್ ಗನಿ ನೇರ್ಲಿ, ಮೌಲಾನಾ ಫಯಾಜ ಇನಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: