RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ

ಗೋಕಾಕ:ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ 

ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 7 :

ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮ ದೇಶದಾಗಿದ್ದು, ಅದನ್ನು ಎಲ್ಲರೂ ಪಾಲನೆ ಮಾಡಿ ಅದರ ಶ್ರೇಷ್ಠತೆಯನ್ನು ಹೆಚ್ಚಿಸುವಂತೆ ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ ಹೇಳಿದರು.

ಮಂಗಳವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಕಾನೂನು ಅರಿವು ನೆರವು ಘಟಕದಿಂದ ಆಯೋಜಿಸಿದ್ದ ಮಾಹಿತಿಹಕ್ಕು ಅಧಿನಿಯಮ 2005ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದಿ ಅವುಗಳ ಆಚರಣೆ ತರುವುದರೊಂದಿಗೆ ಒಳ್ಳೆಯ ರಾಷ್ಟ್ರ ನಿರ್ಮಾಣ ಮಾಡಿ ಅಂತಹ ಕಾನೂನುಗಳಲ್ಲಿ ಮಾಹಿತಿ ಹಕ್ಕು ಕಾನೂನು ಒಂದಾಗಿದ್ದು, ಸರಕಾರ ವಲಯದ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕಾನೂನು ಭ್ರಷ್ಟಾಚಾರದ ವಿರುದ್ಧ ಬ್ರಹ್ಮಾಸ್ತ್ರವಾಗಿದೆ. ವಿದ್ಯಾರ್ಥಿಗಳು ಈ ಹಕ್ಕಿನಡೆ ಸರಕಾರಿ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕರಾದ ಕೆ.ಬಿ.ಬಿರಾದಾರಪಾಟೀಲ, ಮಹಾನಂದಾ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಅಮೀನಾ ಗುಡುಕೇರಿ ಇದ್ದರು.
ರಾಧಿಕಾ ಮಲ್ಲಕನವರ ಸ್ವಾಗತಿಸಿದರು, ಪವಿತ್ರಾ ಹತರವಾ ನಿರೂಪಿಸಿದರು, ಬಸವರಾಜ ಗೋಸಾಲಿ ವಂದಿಸಿದರು.

Related posts: