RNI NO. KARKAN/2006/27779|Friday, November 22, 2024
You are here: Home » breaking news » ಬೆಳಗಾವಿ:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ : ಸಂಧಾನ ಸಭೆ ಯಶಸ್ವಿ : ಗೆದ್ದ ಕತ್ತಿ

ಬೆಳಗಾವಿ:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ : ಸಂಧಾನ ಸಭೆ ಯಶಸ್ವಿ : ಗೆದ್ದ ಕತ್ತಿ 

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ : ಸಂಧಾನ ಸಭೆ ಯಶಸ್ವಿ : ಗೆದ್ದ ಕತ್ತಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಡಿ 22 :

 
ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ ಹಾಕಿದ್ದು, ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕಿನ ನಿರ್ದೇಶಕರುಗಳ ಮಧ್ಯೆ ನಡೆದ ಸಂಧಾನ ಸಭೆ ಯಶಸ್ವಿಯಾಗುವ ಮೂಲಕ ಅಧ್ಯಕ್ಷ ಹುದ್ದೆಯಲ್ಲಿಯೇ ಕತ್ತಿ ಅವರನ್ನು ಮುಂದುವರೆಯಲಿದ್ದಾರೆ.
ಬುಧವಾರ ಸಂಜೆ ನಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಸಂಧಾನ ಸಭೆಯಲ್ಲಿ ರಮೇಶ ಕತ್ತಿ ಮತ್ತು ನಿರ್ದೇಶಕರುಗಳ ಮಧ್ಯೆ ಮೂಡಿದ್ದ ಬಿರುಕು ಸಂಪೂರ್ಣ ನಿವಾರಣೆಯಾಗಿದ್ದು, ಕತ್ತಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಅವರ ನೇತೃತ್ವಕ್ಕೆ ನಿರ್ದೇಶಕರುಗಳು ‘ಜೈ’ ಎಂದಿದ್ದಾರೆ.
ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ರಮೇಶ ಕತ್ತಿ ಅವರೇ ಪೂರ್ಣಾವಧಿಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ನಮ್ಮ ಮುಂದಿಲ್ಲ. ಎಲ್ಲ ನಿರ್ದೇಶಕರುಗಳನ್ನು ಗಣನೆಗೆ ತೆಗೆದುಕೊಂಡು ಪರಸ್ಪರ ಸಹಕಾರದ ಮೂಲಕ ಕತ್ತಿ ಅವರು ಕೆಲಸ ನಿರ್ವಹಿಸಲಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಅಧ್ಯಕ್ಷರು ದೃಢ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಕೆಲ ನಿರ್ದೇಶಕರಿಗೆ ಅಸಮಾಧಾನವಾಗಿರಬಹುದು. ಇದರಿಂದ ಕತ್ತಿ ಅವರ ವಿರುದ್ಧ ಅಪಸ್ವರ ಎತ್ತಿರಬಹುದು. ಇದನ್ನೆಲ್ಲ ಪರಸ್ಪರ ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿರುವ ನಮ್ಮ(ಜಾರಕಿಹೊಳಿ) ಮತ್ತು ಕತ್ತಿ ಕುಟುಂಬಗಳ ಮಧ್ಯೆ ಕೆಲವರು ವೈಶಮ್ಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮ ರಾಜಕೀಯದ ದುರ್ಲಬ ಪಡೆಯಲು ಸಂಚು ಹೂಡುತ್ತಿದ್ದಾರೆ. ಯಾರು ಏನೇ ಷಢ್ಯಂತ್ರ ಮಾಡುತ್ತಿದ್ದರೂ ನಮ್ಮ ಕುಟುಂಬಗಳ ಮಧ್ಯೆ ಯಾವುದೇ ಕಾರಣಕ್ಕೂ ಬಿರುಕು ಮೂಡಲು ಸಾಧ್ಯವಿಲ್ಲ. ಬಾಕಿ ಉಳಿದಿರುವ ಅವಧಿಗೂ ರಮೇಶ ಕತ್ತಿ ಅವರೇ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್‍ನ್ನು ಮುನ್ನಡೆಸಲಿದ್ದಾರೆ. ನಿರ್ದೇಶಕರಲ್ಲಿ ಕೆಲವು ಭಿನ್ನಾಭಿಪ್ರಾಯ ಮೂಡುವುದು ಸ್ವಾಭಾವಿಕ. ಬ್ಯಾಂಕಿನ ವಿಷಯದಲ್ಲಿ ಇತ್ತೀಚೆಗೆ ನಡೆದ ಕಹಿ ಘಟನೆಯನ್ನು ಎಲ್ಲರೂ ಮರೆಯಬೇಕು. ಈ ಮೂಲಕ ಸಹಕಾರ ಪತ್ರಕ್ಕೆ ನಾವೆಲ್ಲರೂ ಬದ್ಧರಿರಬೇಕು. ಎಲ್ಲರೂ ಒಗ್ಗಟ್ಟಾಗಿ ಬಿಡಿಸಿಸಿ ಬ್ಯಾಂಕನ್ನು ರಾಜ್ಯದಲ್ಲಿಯೇ ಮಾದರಿ ಬ್ಯಾಂಕನ್ನಾಗಿ ಪರಿವರ್ತಿಸುವ ಮೂಲಕ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡೋಣವೆಂದು ಶಾಸಕ ಬಾಲಚಂದ್ರ ಅವರು ಸಭೆಯಲ್ಲಿ ತಿಳಿಸಿದರೆನ್ನಲಾಗಿದೆ.
ಈ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ, ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ರಾಜೇಂದ್ರ ಅಂಕಲಗಿ, ಅಪ್ಪಾಸಾಬ ಕುಲಗುಡೆ, ಕೃಷ್ಣಾ ಅನಗೋಳಕರ, ಶಂಕರಗೌಡ ಪಾಟೀಲ, ಶ್ರೀಕಾಂತ ಢವಣ ಭಾಗವಹಿಸಿದ್ದರು

Related posts: