RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುತ್ತದೆ : ಸೋಮಶೇಖರ್

ಗೋಕಾಕ:ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುತ್ತದೆ : ಸೋಮಶೇಖರ್ 

ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುತ್ತದೆ : ಸೋಮಶೇಖರ್

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 27 :

 
ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳು ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುವುದು,ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿಯೇ ಆದರ್ಶರಾಗಿದ್ದರೆ ಅವರು ಸಮಾಜದಲ್ಲಿ ಆದರ್ಶ ದಂಪತಿಗಳಾಗುತ್ತಾರೆ ಎಂದು  ಸೋಮಶೇಖರ ಮಗದುಮ್ಮ ಹೇಳಿದರು.

ಶನಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಇಲ್ಲಿನ ಕನಸು ಫೌಂಡೇಶನ್ ನವರು ಹಮ್ಮಿಕೊಂಡ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ವಿಜೇತ ದಂಪತಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಂಸಾರದಲ್ಲಿ ಸಾಮರಸ್ಯ ಕಾಯ್ದಕ್ಕೊಳ್ಳುವುದು ಅತೀ ಅಗತ್ಯ ಮತ್ತು ಅದು ನಮ್ಮ ಮಕ್ಕಳಿಗೆ ಆದರ್ಶ ಎಂದ ಅವರು ಮಕ್ಕಳಿಗೆ ಉತ್ತಮ ಸಂಸ್ಕೃತಿ ಮನೆಯಿಂದಲೇ ಪ್ರಾರಂಭವಾಗಬೇಕು ಆದರ್ಶ ಕುಟುಂಬ ಕಟ್ಟಲು ದಂಪತಿಗಳಲ್ಲಿ ಹೊಂದಾಣಿಕೆ ಅಗತ್ಯ. ಜೀವನದಲ್ಲಿ ಎದುರಾಗುವ ಕಷ್ಟ ಸುಖಗಳಿಗೆ ಎದೆ ಗುಂದದೆ ಸುಂದರ ಸಂಸಾರ ನಿರ್ಮಿಸಿ ಸಮಾಜಕ್ಕೆ ಒಳ್ಳೆಯ ಸಂಸ್ಕಾರಗಳನ್ನು ನೀಡುವಲ್ಲಿ ಪತಿ ಪತ್ನಿಯರ ಪಾತ್ರ ಹಿರಿಯದಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಬಾಳಿ ಬದುಕಬೇಕಾಗಿದೆ ಎಂದು ಹೇಳಿದರು

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಯಲ್ಲಿ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ಬಸವರಾಜ ದೇಶನೂರ ದಂಪತಿಗಳು ಪ್ರಥಮ ಸ್ಥಾನ, ಆನಂದ ಅಂದಾನಿ ದಂಪತಿಗಳು ದ್ವಿತೀಯ ಸ್ಥಾನ ಹಾಗೂ ಪ್ರಶಾಂತ ಕುರಬೇಟ ದಂಪತಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕೆ,ಎಲ್,ಇ ನಿರ್ದೇಶಕ ಜಯಾನಂದ ಮುನವಳ್ಳಿ, ಫೌಂಡೇಶನ್ ಅಧ್ಯಕ್ಷ ಆನಂದ ಬಿಳ್ಳೂರ, ವಿಕ್ರಮ ಕಾಕಡೆ ,ಚೇತನ ದೂಳಾಯಿ, ಮಹಾಂತೇಶ ಗೊರಗುದ್ದಿ ಹಾಗೂ ಫೌಂಡೇಶನ್ ಎಲ್ಲ ಸದಸ್ಯರು ಉಪಸ್ಥಿತರಿದ್ದರು

Related posts: