RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಕುವೆಂಪು ರಾಷ್ಟ್ರಕವಿಯಾಗಿ, ವಿಶ್ವಮಾನವರಾಗಿ ಬೆಳೆದ ಅವರ ಜೀವನ ಎಲ್ಲರಿಗೂ ಮಾದರಿ : ಮಹಾಲಿಂಗ ಮಂಗಿ

ಗೋಕಾಕ:ಕುವೆಂಪು ರಾಷ್ಟ್ರಕವಿಯಾಗಿ, ವಿಶ್ವಮಾನವರಾಗಿ ಬೆಳೆದ ಅವರ ಜೀವನ ಎಲ್ಲರಿಗೂ ಮಾದರಿ : ಮಹಾಲಿಂಗ ಮಂಗಿ 

ಕುವೆಂಪು ರಾಷ್ಟ್ರಕವಿಯಾಗಿ, ವಿಶ್ವಮಾನವರಾಗಿ ಬೆಳೆದ ಅವರ ಜೀವನ ಎಲ್ಲರಿಗೂ ಮಾದರಿ : ಮಹಾಲಿಂಗ ಮಂಗಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 30 :

ಕುವೆಂಪು ರಾಷ್ಟ್ರಕವಿಯಾಗಿ, ವಿಶ್ವಮಾನವರಾಗಿ ಬೆಳೆದ ಅವರ ಜೀವನ ಎಲ್ಲರಿಗೂ ಮಾದರಿ. ಅವರ ಸಾಹಿತ್ಯವನ್ನು ಎಲ್ಲರೂ ಓದಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು.

ಬುಧವಾರದಂದು ಇಲ್ಲಿನ ಸಿರಿಗನ್ನಡ ವೇದಿಕೆ ಮತ್ತು ಸಿರಿಗನ್ನಡ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .

ವಿಶ್ರಾಂತ ಅಧ್ಯಾಪಕ ಚಂದ್ರಶೇಖರ್ ಅಕ್ಕಿ  ಉಪನ್ಯಾಸ ನೀಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಕಾವ್ಯ, ಮಹಾಕಾವ್ಯಗದ್ಯ, ಕಥನ ಕವನ, ಮಕ್ಕಳ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ವಿಮರ್ಶ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೀವನ ಸಂದೇಶವನ್ನು ರೂಢಿಸಿಕೊಂಡಲ್ಲಿಅದುವೇ ನಾವು ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವವಾಗಿದೆ ಎಂದರು

ಕಾರ್ಯಕ್ರಮವನ್ನು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಜಿರಗ್ಯಾಳ ಉದ್ಘಾಟಿಸಿದರು

ವೇದಿಕೆಯಲ್ಲಿ ಅಶೋಕ ಜಿರಗ್ಯಾಳ, ಈಶ್ವರ ಮಮದಾಪೂರ,ಶ್ರೀಮತಿ ಜಯಾ ಚುನಮರಿ,ಚೇತನ ಜೋಗನ್ನವರ,ಶ್ರೀಮತಿ ವೈಶಾಲಿ ಭರಭರಿ,ಶ್ರೀಮತಿ ಪ್ರಮಿಳಾ ಜಕ್ಕನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್.ಎಲ್.ಬಯ್ಯಾರ ನಿರೂಪಿಸಿದರು,ಮಹಾನಂದಾ  ಗುಣಕಿ ವಂದಿಸಿದರು.

Related posts: