ಗೋಕಾಕ:ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ: ಸಿದ್ದರಾಮಯ್ಯ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ : ಲಖನ ಜಾರಕಿಹೊಳಿ ಸ್ವಷ್ಟನೆ
ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ: ಸಿದ್ದರಾಮಯ್ಯ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ : ಲಖನ ಜಾರಕಿಹೊಳಿ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :
ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ. ಸಿದ್ದರಾಮಯ್ಯ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಗೆ ಶಕ್ತಿ ಇದೆ.16 ಅಲ್ಲ 20 ಶಾಸಕರನ್ನು ಬಿಜೆಪಿಗೆ ಕರೆತರಬಹುದು, ರಮೇಶ ಜಾರಕಿಹೊಳಿ, ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ನಾನು ಪಕ್ಷೇತರನಾಗಿ ಉಳಿಯಲು ತೀರ್ಮಾನಿಸಿದ್ದೇನೆ ಎಂದ ಅವರು ಸಿದ್ದರಾಮಯ್ಯ ಒಬ್ಬರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು.ಉಳಿದವರು ಸ್ವಯಂ ಘೋಷಿತ ನಾಯಕರು.
ಸಿದ್ದರಾಮಯ್ಯ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪಶ್ನಗೆ ಉತ್ತರಿಸಿದರು.
ಬಿಜೆಪಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಕ್ತಿಯನ್ನು ಬಳಸಿಕೊಂಡು 2023ರ ಸಾರ್ವತ್ರಿಕ ಚುನಾವಣೆ ತಯಾರಿ ಮಾಡಬೇಕು.
ಲಕ್ಷ್ಮಣ ಸವದಿಗೆ ಲಖನ ಟಾಂಗ :
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರಿ ಅನುಭವಿಸಿದರೂ ಮತ್ತೆ ಉನ್ನತ ಹುದ್ದೆ ಪಡೆದು ಡಿಕೆಶಿ ಜತೆಗೆ ಸೇರಿ ಕುತಂತ್ರ ಮಾಡುತ್ತಿದ್ದಾರೆ. ಒಬ್ಬರು ಅಥಣಿಯಿಂದ ಸೋತು ಡಿಸಿಎಂ ಆದರೂ ಈಗ ಅವರೇ ಕುಳಿತು ಕುತಂತ್ರ ಮಾಡುತ್ತಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸೇರಿಕೊಂಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕವಟಗಿಮಠ ಅವರನ್ನು ಸೋಲಿಸಿದ್ದಾರೆ. ಮತ್ತೆ ಅವರೇ ಪ್ರತ್ಯೇಕ ಸಭೆಯನ್ನು ಸಹ ಮಾಡಿದ್ದಾರೆ. ಸೋಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ.ಬಿಜೆಪಿ ಸೋಲಿಗೆ ಅಥಣಿ ನಾಯಕರೇ ನೇರ ಕಾರಣ.ಡಿಕೆಶಿ ಜತೆಗೂ ಹಾಗೂ ಬಿಜೆಪಿ ಜತೆಗೂ ಸಂಪರ್ಕದಲ್ಲಿ ಇದ್ದಾರೆ. ಎಂದು
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಲಖನ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಮೊದಲ ಸುತ್ತಿನಲ್ಲೆ ಗೆಲುತ್ತಿದ್ದೆ : ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನನ್ನ ಪರವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಿದ್ರೆ
ನಾನು ಮೊದಲ ಸುತ್ತಿನಲ್ಲಿ ಆಯ್ಕೆಯಾಗುತ್ತಿದೆ. 11 ಜನ ಶಾಸಕರ, ಇಬ್ಬರು ಸಂಸದರ ಶಕ್ತಿ ಏನು. ಈ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು . ಈಗಾಗಲೇ ಒಂದು ಕಾಂಗ್ರೆಸ್, ಮತ್ತೊಂದು ಕಾಲು ಬಿಜೆಪಿಯಲ್ಲಿ ಇಟ್ಟಿರುವ ನಾಯಕರು ಇದ್ದಾರೆ. ಮುಂಜಾನೆ ಒಂದು ಪಾರ್ಟಿ, ಸಂಜೆ ಒಂದು ಪಾರ್ಟಿ ಕಡೆ ಮುಖ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಣ್ಣು ಇಡಬೇಕು. ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ. ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನಕ ಕೊಟ್ಟರೇ ಜಿಲ್ಲೆಯಲ್ಲಿ ಅನಕೂಲ ಆಗಲಿದೆ ಎಂದು ಲಖನ ಹೇಳಿದರು.