ಗೋಕಾಕ:ಪ್ರತಿಯೊಬ್ಬ ನಾಗರಿಕರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದೆ : ಶರಣ ಪೈ
ಪ್ರತಿಯೊಬ್ಬ ನಾಗರಿಕರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದೆ : ಶರಣ ಪೈ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :
ಪ್ರತಿಯೊಬ್ಬ ನಾಗರಿಕರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಎಲ್ಲರೂ ಅವರನ್ನು ಗೌರವಿಸುವಂತೆ ರೋಟರಿ ಜಿಲ್ಲಾ ಪ್ರಾಂಥಪಾಲರ ಪ್ರತಿನಿಧಿ ಶರಣ ಪೈ ಹೇಳಿದರು.
ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಗೋಕಾಕ ರೋಟರಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಾಗೂ ನೇಷನ್ ಬಿಲ್ಡರ್ಸ ಆರ್ವಾಡ್ಸ ಅಡಿ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ದೇಶದ ಬೆನ್ನಲ್ಲುಬಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅವರ ಕಾರ್ಯ ಪವಿತ್ರವಾಗಿದೆ. ಅವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಅವರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ 53 ವಸಂತಗಳನ್ನು ಪೂರೈಸಿ ಗೋಕಾಕ ರೋಟರಿ ಸಂಸ್ಥೆ ಜನರ ಮನದಲ್ಲಿ ನೆಲೆಸಿದೆ. ಈ ಸಂಸ್ಥೆಯಿಂದ ಇನ್ನೂ ಹೆಚ್ಚು ಹೆಚ್ಚಿನ ಸಮಾಜ ಮುಖಿ ಕಾರ್ಯಗಳು ನಡೆಯಲೆಂದು ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಪ್ರಾಂಥಪಾಲ ದಿನೇಶ್ ಕಾಳೆ, ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳ್ಳಿ ,ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ, ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ್ ವರದಾಯಿ, ಕಾರ್ಯದರ್ಶಿ ದಿಲೀಪ್ ಮೆಳವಂಕಿ, ಇನರ್ ವ್ಹಿಲ್ ಅಧ್ಯಕ್ಷೆ ಜ್ಯೋತಿ ವರದಾಯಿ ಇದ್ದರು.
ಮಲ್ಲಿಕಾರ್ಜುನ ಈಟಿ ಸ್ವಾಗತಿಸಿದರು. ಸತೀಶ ನಾಡಗೌಡ ನಿರೂಪಿಸಿದರು. ಜಗದೀಶ ಚುನಮರಿ ವಂದಿಸಿದರು.