ಗೋಕಾಕ:ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಚಾಲನೆ
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 3 :
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕೊಳವಿ ಸಕ್ಕರೆ ಕಾರಾಖಾನೆಯಿಂದ ಮಾಲದಿನ್ನಿ ಕ್ರಾಸ ವರೆಗೆ 14.40 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲಿಕರಣ ಹಾಗೂ ಅಭಿವೃದ್ಧಿ ಮತ್ತು ಅಕ್ಕತಂಗೇರಹಾಳ ಕ್ರಾಸದಿಂದ ಹೊಸೂರು ,ಹುಲಿಕಟ್ಟಿ ಹಾಗೂ ಮಮದಾಪೂರ ಕ್ರಾಸ ನಡೆವೆ ಬಾಕಿ ಉಳಿದ ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿಯ 8.10 ಲಕ್ಷ ರೂಗಳ ಕಾಮಗಾರಿಗಳಿಗೆ ಗುರುವಾರದಂದು ಮಾಲದಿನ್ನಿ ಕ್ರಾಸ ಹತ್ತಿರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಮುಖಂಡರಾದ ಭೀಮಗೌಡ ಪೋಲಿಸಗೌಡರ, ಸುರೇಶ್ ಸನದಿ, ಹನುಮಂತ ದುರ್ಗಣ್ಣವರ, ಲಕ್ಕಪ್ಪ ಮಾಳಗಿ, ವಿಠಲ ಗುಂಡಿ ಸೇರಿದಂತೆ ಅನೇಕರು ಇದ್ದರು.