RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ

ಗೋಕಾಕ:ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ 

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 7 :

 
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ ಖಂಡಿಸಿ ಇಲ್ಲಿನ ಎಐಎಂಐಎಂ ಪಕ್ಷದ ಕಾರ್ಯಕರ್ತರು ಸೋಮವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿ‌ಸಿದರು.

ಉತ್ತರ ಪ್ರದೇಶದ ಕಿಥೌರ್​​ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ತೆರಳುತ್ತಿದ್ದ ವೇಳೆ ಛಜರ್ಸಿ ಟೋಲ್ ಪ್ಲಾಜಾ ಬಳಿ ದುಷ್ಕರ್ಮಿಗಳು ಓವೈಸಿ ಕಾರಿನ ಮೇಲೆ 3-4 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ. ಗುಂಡು ಹಾರಿಸಿದ ಆರೋಪಿಗಳಾದ ಸಚಿನ್‌ ಮತ್ತು ಸುಭಾಮರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಏಕೆ ಪ್ರಕರಣ ದಾಖಲಿಸಿ ಕೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಎಐಎಂಐಎಂ ಕಾರ್ಯಕರ್ತರಾದ ಫಯಾಜ್ ಅಹ್ಮದ್ ಅವಟಿ, ಮಹ್ಮದಗೌಸ ಜಮಾದಾರ, ಮೆಹಬೂಬ್ ತಲವಾರ, ಅಬ್ಬಿದುಲ್ಲಾ ಅವಟಿ,ಯೂಸುಫ್ ಬೇಫಾರಿ, ಆಸೀಫ ಮುಲ್ಲಾ, ಮೌಲಾನಾ ಆಸೀಫ ಶಾಬಾಶಖಾನ,ಅರ್ಬಾಜ್ ದಫೇದಾರ,ಜಾವೇದ ಮುಜಾವರ, ಮೋಹಿನಿ ಪಟೇಲ್,ಯಾಸೀನ್ ಪೈಲವಾನ ಉಪಸ್ಥಿತರಿದ್ದರು.

Related posts: