RNI NO. KARKAN/2006/27779|Monday, December 23, 2024
You are here: Home » breaking news » ಬೆಳಗಾವಿ:ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಕುರಂದವಾಡೆ ನಾಮಪತ್ರ ಸಲ್ಲಿಕೆ

ಬೆಳಗಾವಿ:ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಕುರಂದವಾಡೆ ನಾಮಪತ್ರ ಸಲ್ಲಿಕೆ 

ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಕುರಂದವಾಡೆ ನಾಮಪತ್ರ ಸಲ್ಲಿಕೆ
ನಮ್ಮ ಬೆಳಗಾವಿ ಇ – ವಾರ್ತೆ,ಬೆಳಗಾವಿ ಫೆ 13 :
ಫೆ 27 ಕ್ಕೆ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಪಬ್ಲಿಕ್ ಟಿವಿ ವರದಿಗಾರ ದಿಲೀಪ್ ಕುರಂದವಾಡೆ ಅವರು ರವಿವಾರದಂದು ನಗರದ ಸಂಘದ ಕಛೇರಿಯಲ್ಲಿ ಚುನಾವಣಾಧಿಕಾರಿ ಗುರುಸಿದಪ್ಪ ಪೂಜೇರಿ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ ಪಾಟೀಲ್, ಯಲಪ್ಪ ತಳವಾರ , ಶ್ರೀಶೈಲ ಮಠದ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅರುಣ್ ಪಾಟೀಲ, ಕಾರ್ಯದರ್ಶಿ ಸ್ಥಾನಕ್ಕೆ ಶ್ರಿಕಾಂತ ಕುಬಕಡ್ಡಿ, ಈಶ್ವರ ಹೋಟಿ, ತಾನಾಜಿ ಮುರಂಕರ
ಜಿಲ್ಲಾ ಖಜಾಂಜಿ ಸ್ಥಾನಕ್ಕೆ ಚೇತನ ಹೋಳೆಪ್ಪಗೋಳ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಮಲ್ಲಿಕಾರ್ಜುನರೆಡ್ಡಿ ಗೊಂದಿ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಒಟ್ಟು 15 ಸ್ಥಾನಕ್ಕೆ ಫೆ 13 ರವಿವಾರದಂದು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಭೀಮಶಿ ಜಾರಕಿಹೊಳಿ, ಪುಂಡಲೀಕ ಬಾಳೋಜಿ ,ರಾಜಶೇಖರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: