ಗೋಕಾಕ:ಲತಾ ಮಂಗೇಶಕರ ಜಗತ್ತಿನಲ್ಲಿಯೇ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ಮಗದುಮ್ಮ
ಲತಾ ಮಂಗೇಶಕರ ಜಗತ್ತಿನಲ್ಲಿಯೇ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ಮಗದುಮ್ಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 14 :
8 ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿ, ಜಗತ್ತಿನಲ್ಲಿಯೇ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅವರು ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಇಲ್ಲಿನ ರೋಟರಿ ಸೇವಾ ಸಂಘದ ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಇನರ್ ವ್ಹಿಲ್ ಸಂಸ್ಥೆ ಹಾಗೂ ಸ್ವರ ಸಂಗಮ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಭಾರತ ರತ್ನ ಗಾನ ಕೋಗಿಲೆ ಲತಾ ಮಂಗೇಶಕರ ಹಾಗೂ ಕನ್ನಡ ಕಬೀರ ಇಮ್ರಾಹಿಂ ಸುತ್ತಾರ ಅವರಿಗೆ ಸ್ವರ ನಮನ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಬ್ರಾಹಿಂ ಸುತ್ತಾರ ಅವರು ಭಾವೈಕತೆಯ ಹರಿಕಾರರಾಗಿ ಶರಣರ ವಚನಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿ ಕನ್ನಡದ ಕಬೀರರಾಗಿದ್ದರು. ಈ ಇಬ್ಬರು ಹಿರಿಯ ಚೇತನಗಳಿಗೆ ಭಗವಂತ ಚೀರ ಶಾಂತಿ ನೀಡಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಜು ವರದಾಯಿ, ಇನರ್ ವ್ಹಿಲ್ ಸಂಸ್ಥೆಯ ಅಧ್ಯಕ್ಷೆ ಜೋತಿ ವರದಾಯಿ, ಸ್ವರ ಸಂಗಮದ ಅಧ್ಯಕ್ಷೆ ವಿದ್ಯಾ ಮಗದುಮ್ಮ, ಕಾರ್ಯದರ್ಶಿ ಶಶಿಕಲಾ ಶಿಂಧೆ ,ವಿದ್ಯಾ ಗುಲ್ ಇದ್ದರು.