RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಾಲೇಜಿನ ಮುಂದೆ 2 ಘಂಟೆಗೂ ಹೆಚ್ಚು ಕಾಲ ಧರಣಿ

ಗೋಕಾಕ:ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಾಲೇಜಿನ ಮುಂದೆ 2 ಘಂಟೆಗೂ ಹೆಚ್ಚು ಕಾಲ ಧರಣಿ 

ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಾಲೇಜಿನ ಮುಂದೆ 2 ಘಂಟೆಗೂ ಹೆಚ್ಚು ಕಾಲ ಧರಣಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 17 :

 
ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಾಲೇಜಿನ ಮುಂದೆ ಧರಣಿ ನಡೆಯಿಸಿ ಪ್ರತಿಭಟಿಸಿದ ಘಟನೆ ನಗರದಲ್ಲಿ ಜರುಗಿದೆ.
ಗುರುವಾರದಂದು ಇಲ್ಲಿನ ಜೆಎಸ್ಎಸ್ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನೀಯರು ಕಾಲೇಜುಗಳ ಮುಂದೆ ಹಿಜಾಬ್ ಇಲ್ಲದಿದ್ದರೂ ಕಡೆ ಪಕ್ಷ ವೇಲ್ ಧರಿಸಿ ತರಗತಿ ಕೂರಲು ಅನುವು ಮಾಡಿ ಕೊಡಬೇಕೆಂದು ಆಗ್ರಸಿದರು. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರು ಒಪ್ಪದೆ ಇದ್ದಾಗ ಧರಿಣಿ ನಡೆಸಲು ಮುಂದಾಗ ವಿದ್ಯಾರ್ಥಿಗಳು ವಿ ವಾಂಟ ಜಸ್ಟಿಸ್ , ಹಿಜಾಬ್ ಇಸ್ ಅವರ ರೈಟ್ ಎಂದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ, ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ, ಸಿಪಿಐ ಗೋಪಾಲ ರಾಠೋಡ , ಬಿಇಒ ಜಿ.ಬಿ‌.ಬಳಗಾರ ಹಾಗೂ ಪಿ.ಎಸ್.ಐ ಕೆ ವಾಲಿಕರ ವಿದ್ಯಾರ್ಥಿನೀಯರ ಮನವಲಿಸಲು ಹರಸಹಾಸ ಪಟ್ಟುರು ಸಹ ವಿದ್ಯಾರ್ಥಿನೀಯರು ತಮ್ಮ ಪಟ್ಟ ಸಡಲಿಸದೆ ಪ್ರತಿಭಟನೆಯನ್ನು ಮುಂದೆ ವರಿಸಿದರು. ನಂತರ ಸಮಾಜದ ಮುಖಂಡರನ್ನು ಕರೆಯಿಸಿದ ಪೊಲೀಸರು ವಿದ್ಯಾರ್ಥಿನೀಯರನ್ನು ಕರೆಯಿಸಿ ಮಾತನಾಡಲು ಸೂಚಿಸಿದರು. ವಿದ್ಯಾರ್ಥಿನೀಯರನ್ನು ಕರೆಯಿಸಿ ಮಾತನಾಡಿದ ಮುಖಂಡರು ಹಿಜಾಬ್ ವಿಷಯ ನ್ಯಾಯಾಲಯದಲ್ಲಿರುವದರಿಂದ ಪ್ರತಿಭಟನೆ ಮಾಡುವದು ಸರಿಯಲ್ಲ ನ್ಯಾಯಾಲಯದ ತೀರ್ಪು ಬರುವರೆಗೆ ಶಾಂತಿಯಿಂದ ವರ್ತಿಸುವಂತೆ ತಿಳಿ ಹೇಳಿದಾಗ ವಿದ್ಯಾರ್ಥಿನೀಯರು ಪ್ರತಿಭಟನೆ ಕೈ ಬಿಟ್ಟು ಮನೆಗಳಿಗೆ ತೆರಳಿದರು.

Related posts: